»   » ಟಿವಿ ಹೀರೋಯಿನ್ ಮೇಲೆ ಮಾಂತ್ರಿಕನ ಅತ್ಯಾಚಾರ

ಟಿವಿ ಹೀರೋಯಿನ್ ಮೇಲೆ ಮಾಂತ್ರಿಕನ ಅತ್ಯಾಚಾರ

By: ರವಿಕಿಶೋರ್
Subscribe to Filmibeat Kannada

ಮನುಷ್ಯನಿಗೆ ಆಸೆ ಇರಬೇಕು ನಿಜ ಆದರೆ ಅತ್ಯಾಸೆ, ದುರಾಸೆ ಇರಬಾರದು. ಇದ್ದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಒಂದು ಸಣ್ಣ ನಿದರ್ಶನ. ಲಾಟರಿಯಲ್ಲಿ ಫ್ಲಾಟ್ ಒಂದನ್ನು ಗೆಲ್ಲಬೇಕೆಂಬ ದುರಾಸೆಯಿಂದ ಒಬ್ಬ ಟಿವಿ ಹೀರೋಯಿನ್ ಮಾಡಿದ ಪ್ರಯತ್ನ ಕಡೆಗೆ ಆಕೆಯ ಮೇಲೆ ಅತ್ಯಾಚಾರಕ್ಕೆ ಕಾರಣವಾಯಿತು.

ಅತ್ಯಾಚಾರದ ಜೊತೆಗೆ ಕೈಯಲ್ಲಿದ್ದ ರು.26 ಲಕ್ಷ ಹಣವನ್ನೂ ಲಪಟಾಯಿಸಿದ್ದಾನೆ ಮಂತ್ರವಾದಿ. ಆಂಗ್ಲ ಪತ್ರಿಕೆಯೊಂದರಲ್ಲಿ ಬಂದ ವರದಿಯ ವಿವರಗಳು ಹೀಗಿವೆ, ಮುಂಬೈ ಮೂಲದ ಹಿಂದಿ ಟಿವಿ ಹೀರೋಯಿನ್ MHADA (Mumbai board lottery) ಲಾಟರಿ ಹಣದಲ್ಲಿ ದುಬಾರಿ ಫ್ಲಾಟ್ ಖರೀದಿಸಲು ಮೊರೆ ಹೋಗಿದ್ದು ಒಬ್ಬ ಮಂತ್ರವಾದಿಯನ್ನು...

TV actress conned Rs 26 lakh raped tantrik

ಫ್ಲಾಟ್ ಸಿಗುವಂತೆ ಮಾಡುತ್ತೇನೆ, ಅದಕ್ಕಾಗಿ ತನಗೆ ರು.26 ಲಕ್ಷ ಕೊಡಬೇಕು ಎಂದು ಮಂತ್ರವಾದಿ ಬೇಡಿಕೆ ಇಡುತ್ತಾನೆ. ಜೊತೆಗೆ ತನ್ನೊಂದಿಗೆ ಸೆಕ್ಸ್ ನಲ್ಲಿ ಪಾಲ್ಗೊಳ್ಳಬೇಕೆಂದು ಹೇಳುತ್ತಾನೆ. ಲಾಟರಿ ಮುಖೇನ ಫ್ಲಾಟ್ ಗೆಲ್ಲಲೇಬೇಕೆಂಬ ಅತ್ಯಾಸೆಪಟ್ಟಿದ್ದ ಮಾಧಾ ಮಂತ್ರವಾದಿಯ ಮಾಂತ್ರಿಕ ಮಾತುಗಳಿಗೆ ಮರುಳಾಗುತ್ತಾರೆ.

ಇಪ್ಪತ್ತೇಳರ ಹರೆಯದ ಈ ನಟಿ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಲಾಟರಿಯಲ್ಲಿ ಫ್ಲಾಟ್ ಗೆಲ್ಲಬೇಕೆಂದು ಬಹಳ ದಿನಗಳಿಂದ ಕನಸು ಕಾಣುತ್ತಿದ್ದರು. ಈ ಹಿಂದೆ ಲಾಟರಿಯಲ್ಲಿ ಪಾಲ್ಗೊಂಡ ಮಾಧಾ ಅವರಿಗೆ ಸ್ವಲ್ಪದರಲ್ಲಿ ತಪ್ಪಿಹೋಗಿತ್ತು. ಕಡೆಗೆ ಆಕೆ ಮೊರೆಹೋಗಿದ್ದು ಮಂತ್ರವಾದಿಯನ್ನು.

ಈ ಮಂತ್ರವಾದಿಯ ಹೆಸರು ಇಸ್ಮಾಯಿಲ್ ಅಜೀಂ ಖಾನ್ (35) ಎಂದು ಗುರುತಿಸಲಾಗಿದೆ. ನಟಿಯ ಮನೆಗೆ ಹೋಗಿ ಪೂಜೆಗಳನ್ನು ಮಾಡಿ ತನ್ನೊಂದಿಗೆ ಸೆಕ್ಸ್ ನಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದ್ದ. ದೇವರೊಂದಿಗೆ ಮಾತನಾಡಿ ಹೇಗಾದರೂ ಮಾಡಿ ಆ ಫ್ಲಾಟ್ ನಿನಗೇ ದಕ್ಕುವಂತೆ ಮಾಡುತ್ತೇನೆ ಎಂದಿದ್ದ. ಆಕೆಯ ಬಳಿ ಇದ್ದ ರು.26 ಲಕ್ಷದೊಂದಿಗೆ ಪರಾರಿಯಾಗಿದ್ದ. ಈ ಉಂಡು ಹೋದ ಕೊಂಡು ಹೋದ ಮಂತ್ರವಾದಿ ಸದ್ಯಕ್ಕೆ ಮುಂಬೈ ಚಾರ್ಕಪ್ ಪೊಲೀರ ಅತಿಥಿಯಾಗಿದ್ದಾನೆ.

English summary
The 27-year-old woman wanted to win a flat in the MHADA lottery and went to the self-styled godman, who allegedly forced her to perform sexual acts and pay up the money as offerings to 'ensure' she won the lucky draw.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada