»   » ಐಶ್ವರ್ಯ ರೈ ಮಗಳಿಗೆ ರಾಹು ಕೇತು ದೋಷ

ಐಶ್ವರ್ಯ ರೈ ಮಗಳಿಗೆ ರಾಹು ಕೇತು ದೋಷ

Posted By:
Subscribe to Filmibeat Kannada

ಬಾಲಿವುಡ್ ನಟಿ ಐಶ್ವರ್ಯ ರೈ ಮುದ್ದಾದ ಮಗುವಿಗೆ ಜನ್ಮ ನೀಡಿದ್ದು ಆಗಲೆ ಎರಡು ವಾರದ ಮೇಲಾಗಿದೆ. ಈಗ ಐಶೂಗಿಂಗಲೂ ಹೆಚ್ಚಾಗಿ ಆಕೆಯ ಮಗುವಿನ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಐಶೂ ಮಗುವಿನ ವಿಚಾರದಲ್ಲಿ ಒಂದು ಅಂಶ ಮಾತ್ರ ಬಾಲಿವುಡ್ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಅಯ್ಯೋ ಪಾಪ ಐಶ್ವರ್ಯ ರೈ ಮಗಳಿಗೂ ಅಮ್ಮನ ದೋಷವೇ? ಎಂದು ಕೆಲವರು ಸಂಕಟಪಡುತ್ತಿದ್ದಾರೆ. ಇಷ್ಟಕ್ಕೂ ವಿಷಯ ಏನೆಂದರೆ...

ಐಶ್ವರ್ಯ ರೈ ಹಾಗೂ ಅಭಿಷೇಕ್ ಮದುವೆಗೂ ಮುನ್ನ ಒಂದು ಘಟನೆ ನಡೆದಿತ್ತು. ಅದೇನೆಂದರೆ ಐಶ್ವರ್ಯ ರೈ ಜಾತಕದ ಪ್ರಕಾರ ಆಕೆಗೆ ರಾಹು ಕೇತು ದೋಷವಿದೆ. ಆಕೆ ಮೊದಲು ಯಾರನ್ನು ವರಿಸುತ್ತಾರೋ ಅವರಿಗೆ ಕೆಟ್ಟದಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದ್ದರು. ಹಾಗಾಗಿ ಐಶು ಮದುವೆ ಮೊದಲು ನಡೆದದ್ದು ಕದಳಿವೃಕ್ಷದೊಂದಿಗೆ. ಆ ಬಳಿಕವೇ ಐಶುಗೆ ಅಭಿಷೇಕ್ ತಾಳಿ ಕಟ್ಟಿದ್ದರು.


ಇದೆಲ್ಲಾ ಹಳೆ ಕತೆಯಾಯಿತು. ಇದೀಗ ಐಶೂ ಮಗಳು ಅಮ್ಮನ ಹೋಲಿಕೆಗಳೊಂದಿಗೆ ಹುಟ್ಟುವುದರ ಜೊತೆಗೆ ಆಕೆಗೂ ರಾಹು ಕೇತು ದೋಷ ಇದೆ ಎಂಬ ಮಾತುಗಳನ್ನು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರವನ್ನು ಬಲವಾಗಿ ನಂಬುವ ಬಚ್ಚನ್ ಕುಟುಂಬ ಐಶ್ವರ್ಯ ರೈ ಮಗಳಿಗೂ ಅದೇ ರೀತಿ ಮದುವೆ ಮಾಡುತ್ತಾರೇನೋ ಎಂಬ ಸಂದೇಹಗಳು ವ್ಯಕ್ತವಾಗುತ್ತಿದೆ.

ಆದರೆ ನಿರೀಶ್ವರ ವಾದಿಗಳು ಮಾತ್ರ ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಹೀಗೂ ಉಂಟೇ ಎಂದು ಖಡಾಖಂಡಿತವಾಗಿ ವಿರೋಧಿಸುತ್ತಿದ್ದಾರೆ. ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರಗಳೆಲ್ಲಾ ಮೂಢನಂಬಿಕೆಯ ಪ್ರತೀಕ ಎನ್ನುವವರ ಸಂಖ್ಯೆಗೂ ಕಡಿಮೆಯಿಲ್ಲ. ನೀವೇನಂತೀರಾ?(ಏಜೆನ್ಸೀಸ್)

English summary
Aishwarya Rai Baby is born on 16 which makes her number 7 (Ketu) person that is ruled by number 2 (moon). Her sun-sign is Scorpio - number 9 ( Mars). Her destiny number is 4 (Rahu).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada