»   » ಯಮನ ಮನೆಯ ಕದತಟ್ಟಿ ಬಂದ ಕ್ಲಾಡಿಯಾ

ಯಮನ ಮನೆಯ ಕದತಟ್ಟಿ ಬಂದ ಕ್ಲಾಡಿಯಾ

Subscribe to Filmibeat Kannada

ಇದು 'ಬಿಗ್ ಬಾಸ್' ರಿಯಾಲಿಟಿ ಶೋನ ಲಲನೆ ಕ್ಲಾಡಿಯಾ ಸಿಯಸ್ಲ ಅವರು ಸತ್ತು ಬದುಕಿದ ಕಥೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಅಥವಾ stranger than fiction ಎನ್ನುವಂಥ ರೋಮಾಂಚನಗೊಳಿಸುವ ಒಂದು ದೃಶ್ಯಕಥಾವಳಿ. ಆಕಸ್ಮಾತ್ ಈ ಕಥೆ ಕೂಡ ಮೋಹಕ ಮುಗುಳು ನಗೆಗೆ ಹೆಸರಾದ ಇನ್ನೊಬ್ಬ ಸೂಪರ್ ಮಾಡೆಲ್ ಬೆಡಗಿಯ ರೊಮ್ಯಾಂಟಿಕ್ ವರದಿಗಳೆಂದು ಭಾವಿಸಿದರೆ ನೀವು ಖಂಡಿತ ದಾರಿ ತಪ್ಪುತ್ತೀರಿ.

ಕ್ಲಾಡಿಯಾ ಸಿಯಸ್ಲ ಸ್ಟಂಟ್ ಪೈಲೆಟ್ ಕೂಡ ಎಂಬ ಸಂಗತಿ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಒಂದು ವರ್ಷದ ಹಿಂದೆ ಸಂಭವಿಸಿದ ಆ ಮೈನವಿರೇಳಿಸುವ ವೈಮಾನಿಕ ಸಾಹಸ ಅನುಭವವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ, ಉಳಿದ ಎಲ್ಲ ಕಥೆಗಳನ್ನು ಚಿತ್ರಗಳೇ ಹೇಳಲಿ.

ಎಫ್ 16 ಯುದ್ಧ ವಿಮಾನಗಳನ್ನು ಹಾರಿಸುವ ಪರವಾನಗಿ ಕ್ಲಾಡಿಯಾ ಅವರಿಗಿದೆ. ಯುದ್ದಕ್ಕಲ್ಲ, ಸ್ಟಂಟ್ ಪೈಲೆಟ್ಟ್ ಮಾಡುವ ಸಾಹಸ ಕ್ರೀಡೆ ಎಂದಿಟ್ಟುಕೊಳ್ಳಿ. ಈ ಘಟನೆ ನಡೆದದ್ದು ಜರ್ಮನಿಯ ಆಕಾಶದಲ್ಲಿ. ಒಂದು ಕ್ಷಣ ಮೈಮರೆತರೆ ಆಗಬಾರದ ಅನಾಹುತಕ್ಕೆ ಈಡಾಗುವ ದುರಂತ ಸಾಹಸಕ್ಕೆ ಕೈಹಾಕಿದ ಕ್ಲಾಡಿಯಾ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ವೃತ್ತಾಂತವಿದು, ನೋಡಿ.

ಸಾಹಸ ಕ್ರೀಡೆಯಿಂದ ಬದುಕುಳಿದ ನಂತರ ಕ್ಲಾಡಿಯಾ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ ಹೇಳಿದ್ದೇನೆಂದರೆ , "ಇನ್ನೇನು ಸತ್ತೇ ಹೋಗುತ್ತೇನೆ ಎನ್ನುವ ಕ್ಷಣಗಳನ್ನು ಎದುರಿಸಿದ ಅನುಭವ ನನಗಾಯಿತು. ಆಗಷ್ಟೆ ನನಗೆ ಸಾವು ಬದುಕು ನಡುವಿನ ಅರ್ಥ ವೇದ್ಯವಾಯಿತು, ಬದುಕಿಬಂದೆ ಎನ್ನುವುದು ಗೊತ್ತಾದ ಕ್ಷಣವೇ ನನ್ನ ಜೀವನದ ದಿಕ್ಕೂ ಬದಲಾಯಿತು, ಬದುಕಿಗೊಂದು ಹೊಸ ಅರ್ಥ, ಹೊಸ ವ್ಯಾಖ್ಯೆ ದೊರೆಯಿತು, ಹೊಸ ತಿರುವಿನಲ್ಲಿ ನನ್ನನ್ನು ಕೊಂಡೊಯ್ಯಿತು"

ಆಕೆಯ ಬದುಕು ಸಮಾಜಸೇವೆಯತ್ತ ಹೊರಳಿದ್ದೇ ಈ ಘಟನೆಯ ನಂತರ. ಬಡವರಿಗೆ, ದಿಕ್ಕಿಲ್ಲದವರಿಗೆ, ನಿರ್ಭಾಗ್ಯ ಸೋದರ ಸೋದರಿಯರಿಗೆ ನೆರವಾಗಬೇಕು ಎಂಬ ಸಂಕಲ್ಪತೊಟ್ಟ ಕ್ಲಾಡಿಯಾ ಭಾರತದಲ್ಲಿ ಸಮಾಜ ಸೇವೆಗೆ ಧುಮುಕಿದರು. ಬಡವರ ಏಳಿಗೆಗೆ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಣಕ್ಕೆ ಕಾಯಾ ವಾಚಾ ಮನಸಾ ಶ್ರಮಿಸಿದ ಕ್ಲಾಡಿಯಾಗೆ ಮೊನ್ನೆ 26ರ ನವೆಂಬರ್ನಲ್ಲಿ ಕರ್ಮವೀರ ಪುರಸ್ಕಾರವೂ ಪ್ರಾಪ್ತವಾಯಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada