»   » ಕೆಂಪು ಸೀರೆಯಲ್ಲಿ ಕಣ್ಣು ತಂಪು ಮಾಡಿದ ಸನ್ನಿ ಲಿಯೋನ್

ಕೆಂಪು ಸೀರೆಯಲ್ಲಿ ಕಣ್ಣು ತಂಪು ಮಾಡಿದ ಸನ್ನಿ ಲಿಯೋನ್

Posted By:
Subscribe to Filmibeat Kannada

ಪೋರ್ನ್ ಚಿತ್ರಗಳ ರಾಣಿ ಸನ್ನಿ ಲಿಯೋನ್ ಇದೇ ಮೊದಲ ಬಾರಿಗೆ ಸೀರೆಯುಟ್ಟು ರಸಿಕರ ಕಣ್ಣು ತಂಪು ಮಾಡಿದ್ದಾರೆ. 'ಬಿಗ್ ಬಾಸ್ 5' ರಿಯಾಲಿಟಿ ಶೋಗೆ ಅಡಿಯಿಟ್ಟ ಬಳಿಕ ಸನ್ನಿ ಜನಪ್ರಿಯತೆಯ ತುತ್ತತುದಿ ತಲುಪಿದ್ದರು. ಅಲ್ಲಿಂದ ಆಕೆಯನ್ನು ಬಾಲಿವುಡ್‍‌ನ 'ಜಿಸ್ಮ್ 2' ಚಿತ್ರಕ್ಕೆ ಕರೆತಂದವರು ಪೂಜಾ ಭಟ್.

ಇತ್ತೀಚೆಗೆ ಕೆಂಪು ಸೀರೆಯಲ್ಲಿ ಕೆಂದಾವರೆಯಂತೆ ಕಂಗೊಳಿಸುತ್ತಿರುವ ತಮ್ಮ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಾಕಿ ಗಮನಸೆಳೆದಿದ್ದಾರೆ. ಸಾಮಾನ್ಯವಾಗಿ ಆಕೆಯನ್ನು ಫಾಲೋ ಮಾಡುವವರು ಏನಾದರೂ ರುಸುರುಸು ಚಿತ್ರಗಳು ಸಿಗುತ್ತವೆಯೋ ಎಂದೇ ನಿರೀಕ್ಷಿಸುತ್ತಿರುತ್ತಾರೆ. ಆದರೆ ಸನ್ನಿ ಸೀರೆಯಲ್ಲಿ ಚಮಕ್ ನೀಡಿದ್ದಾರೆ.

ಈ ಸೀರೆಯನ್ನು ವಿನ್ಯಾಸಗೊಳಿಸಿದ್ದು ರೊಹಿತ್ ವರ್ಮ ಅವರಂತೆ. ಈ ಫೋಟೋವನ್ನೇ ತನ್ನ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಫೋಟೋ ಆಗಿಯೂ ಸನ್ನಿ ಬಳಸಿಕೊಂಡಿದ್ದಾರೆ. ಭಾರತೀಯ ನಾರಿಯರ ನಾಡಿಮಿಡಿತ ಸೀರೆಯಲ್ಲೇ ಅಡಗಿದೆ ಎಂಬುದು ಸನ್ನಿಗೂ ಮನದಟ್ಟಾಗಿದೆಯಂತೆ. (ಏಜೆನ್ಸೀಸ್)

English summary
Actress Sunny Leone who created quite a buzz by making an entry in the famous reality show Bigg Boss 5 will soon be seen in Pooja Bhatt's Bollywood film Jism 2. Meanwhile, Sunny has posted a picture on twitter that showcases her in a beautiful red coloured saree.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada