»   » ಬಿಕಿನಿ ತೊಟ್ಟರೆ ಏನು ತಪ್ಪು: ದೀಪಿಕಾ ಪಡುಕೋಣೆ

ಬಿಕಿನಿ ತೊಟ್ಟರೆ ಏನು ತಪ್ಪು: ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ಸುಮ್ನೆ ಕಡ್ಡಿನಾ ಗುಡ್ಡ ಮಾಡ್ಬೇಡಿ. ಬಿಕಿನಿ ತೊಟ್ಟು ನಡೆದಾಡಿದ್ರೆ ಭೂಮಿಯೇನು ಬಾಯಿ ಬಿಡಲ್ಲ. ನಾವು ಹಾಕೋ ಬಟ್ಟೆ ಬಗ್ಗೆ ನಮಗೆ ಕಾಳಜಿ ಇದೆ. ನೋಡೋ ನೋಟ ಸರಿ ಇರ್ಬೇಕು. .. ಹಿಂಗೆಲ್ಲಾ ಬೋಲ್ಡ್ ಮಾತುಗಳನ್ನಾಡಿದ್ದು ನಮ್ಮ ಬೆಂಗಳೂರಿನ ಬಿಂದಾಸ್ ಬೆಡಗಿ ದೀಪಿಕಾ ಪಡುಕೋಣೆ.

ಇತ್ತೀಚೆಗೆ ಬಿಡುಗಡೆಯಾದ ಹೌಸ್ ಫುಲ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ತೊಟ್ಟು, ಸಹ ನಾಯಕಿಯರಾದ ಲಾರಾ ದತ್ತ, ಜಿಯಾ ಖಾನ್ ಜೊತೆ ಇಟಲಿಯ ಬೀಚ್ ನಲ್ಲಿ ನಡೆದುಕೊಂಡು ಬರುವ ದೃಶ್ಯವಿದೆ. ಈ ದೃಶ್ಯದಲ್ಲಿ ಅಂಥಾ ಅಶ್ಲೀಲತೆ ಏನಿಲ್ಲ. ಚಿತ್ರದ ಕಥೆಗೆ ಅನುಗುಣವಾಗಿ ನಾವು ಅಭಿನಯಿಸಿದ್ದೀವಿ ಅಷ್ಟೇ ಎನ್ನುತ್ತಾರೆ ದೀಪಿಕಾ.

ಚಿತ್ರಜಗತ್ತಿಗೂ ಕಾಲಿರಿಸುವ ಮುನ್ನ ರೂಪದರ್ಶಿಯಾಗಿ ಮಿಂಚಿರುವ ದೀಪಿಕಾ, ಕಿಂಗ್ ಫಿಷರ್ ಮಾಡೆಲ್ ಆಫ್ ದ ಇಯರ್, ಸೂಪರ್ ಮಾಡೆಲ್ ಎಂದೆಲ್ಲಾ ಬಿರುದು ಬಾವಲಿಗಳನ್ನು ಒಟ್ಟು ಮಾಡಿಕೊಂಡಾಕೆ. ಮಾಡೆಲ್ ಅಂದ ಮೇಲೆ ಬಿಕಿನಿ ತೊಡುವುದು ಕಾಮನ್. ಅದು ಲಾರಾದತ್ತಗೂ ಅನ್ವಯಿಸುತ್ತದೆ.

ಚಿತ್ರದ ಪ್ರಚಾರಕ್ಕೆ ಬಿಕಿನಿ ತೊಟ್ಟ ಚಿತ್ರಗಳನ್ನು, ಪ್ರೊಮೊಗಳನ್ನು ಪದೇ ಪದೇ ಪ್ರಸಾರ ಮಾಡುವುದು ಅಷ್ಟು ಸರಿಯಲ್ಲ. ರೋಮಾನ್ಸ್ ಹಾಗೂ ಹಾಸ್ಯಭರಿತವಾದ ಈ ಚಿತ್ರದ ಬಗ್ಗೆ ಜನ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದರೂ, ಒಂದೇ ಬಾರಿ ಈ ರೀತಿ ಮೂರು ನಟಿಯರು ಮೈಚಳಿ ಬಿಟ್ಟು ಬಿಕಿನಿ ತೊಟ್ಟು ನಡೆದದ್ದು ಇದೇ ಮೊದಲು ಎನಿಸುತ್ತದೆ ಎಂದು ದೀಪಿಕಾ ಹೇಳಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada