»   » ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಅಮಿತಾಬ್ ಬಚ್ಚನ್

ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಅಮಿತಾಬ್ ಬಚ್ಚನ್

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸುದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಕಿಬ್ಬೊಟ್ಟೆ ಊದಿಕೊಂಡಿದೆ. ಸುದೀರ್ಘ ಸಮಯದಿಂದ ನೋವನ್ನು ಸಹಿಸಿಕೊಂಡು ಬರುತ್ತಿರುವ ಅಮಿತಾಬ್ ಇದೀಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ.1982ರಲ್ಲಿ 'ಕೂಲಿ' ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಬಳಿಕ ಅಮಿತಾಬ್ ಮೂರು ಸಲ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

"ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು ಕಿಬ್ಬೊಟ್ಟೆ ಊತ ಅಪಾಯಕಾರಿ ಸ್ಥಿತಿ ತಲುಪಿದೆ. ಇದರಿಂದ ನಾನಾ ಸಮಸ್ಯೆಗಳು ಉದ್ಭವಿಸಿವೆ.ದೀರ್ಘ ಸಮಯ ನಿಂತರೆ, ನಡೆದರೆ ತೀಕ್ಷ್ಣ ನೋವು ಕಾಣಿಸಿಕೊಳ್ಳುತ್ತದೆ.ಡಾನ್ಸ್ ಹಾಗೂ ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಂಡಾಗ ಅಸಾಧ್ಯ ನೋವಾಗುತ್ತದೆ. ಹರ್ನಿಯಾ ಬೆಲ್ಟ್ ಕಟ್ಟಿಕೊಳ್ಳುವುದರಿಂದ ತಾತ್ಕಾಲಿಕ ಉಪಶಮನ ದೊರೆಯುತ್ತಿದೆಯೇ ವಿನಃ ಸಮಸ್ಯೆ ಮಾತ್ರ ಗುಣಮುಖ ಕಾಣುತ್ತಿಲ್ಲ." ಎಂದು ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಅಂತಿಮವಾಗಿ ತಾವು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ. ಕಿಬ್ಬೊಟ್ಟೆಯ ಎರಡು ಕಡೆ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಮೂರು ಸಲ ಉದರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಇದೀಗ ಮತ್ತ್ತೊಂದು ಹರ್ನಿಯಾ ಬೆಳವಣಿಗೆಯಾಗಿದೆ. ಪದೇ ಪದೇ ಉದರಕ್ಕೆ ಶಸ್ತ್ರ ಚಿಕಿತ್ಸೆ ಮಾಡುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ವೈದ್ಯರು.

ಮೂರು ಬಾರಿ ಶಸ್ತ್ರ ಚಿಕಿತ್ಸೆಯಾಗಿರುವ ಕಾರಣ ಸಾಹಸ ಸನ್ನಿವೇಶಗಳಲ್ಲಿ ನಟಿಸುವುದು ಕಷ್ಟಕರವಾಗಿದೆ. ಶಸ್ತ್ರ ಚಿಕಿತ್ಸೆಯಾದ ಕಾರಣ ಎಡಭುಜ ಸ್ವಲ್ಪ ಬಗ್ಗಿದಂತೆ ಕಾಣುತ್ತದೆ ಹೊರತು ಇದು ಸ್ಟೈಲ್ ಗಾಗಿ ಅಲ್ಲ. ಒಟ್ಟಿನಲ್ಲಿ 67 ವರ್ಷದ ಅಮಿತಾಬ್ ಇಳಿಪ್ರಾಯದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವುದು ಅವರ ಅಭಿಮಾನಿಗಳಿಗೆ ನೋವಿನ ವಿಚಾರವಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada