»   » ಯಾನಾಗೆ ಹೊಸ ವರ್ಷದ ಉಡುಗೊರೆಯಾಗಿ ಚಡ್ಡಿ

ಯಾನಾಗೆ ಹೊಸ ವರ್ಷದ ಉಡುಗೊರೆಯಾಗಿ ಚಡ್ಡಿ

Posted By:
Subscribe to Filmibeat Kannada

ಕಳೆದ ವರ್ಷ ಬಾಲಿವುಡ್ ತಾರೆ ಯಾನಾ ಗುಪ್ತಾ ತಾವು ಚಡ್ಡಿ ಧರಿಸದೆ ಬಂದ ಸುದ್ದಿ ಇಡೀ ಜಗತ್ತಿನ ಕಣ್ಣು ಕುಕ್ಕಿತ್ತು. ಬಹುಶಃ ಈಕೆಯ ಬಳಿ ಚಡ್ಡಿಗಳು ಇರಲಿಲ್ಲವೋ ಏನೋ ಗೊತ್ತಿಲ್ಲ. ಇದನ್ನು ಮನಗಂಡ ಆಕೆಯ ಅಭಿಮಾನಿಗಳು ಇನ್ನಾದರೂ ಚಡ್ಡಿ ಧರಿಸಿ ಓಡಾಡಿ ಎಂದು ಆಕೆಗೆ ಹೊಸ ವರ್ಷದ ಹಾಗೂ ಕ್ರಿಸ್ಮಸ್ ಉಡುಗೊರೆಯಾಗಿ ಚಡ್ಡಿಗಳನ್ನು ಕೊಟ್ಟಿದ್ದಾರೆ.

ಸದ್ಯಕ್ಕೆ ಯಾನಾ ಗುಪ್ತಾ "ಝಲಕ್ ದಿಖಲಾಜಾ" ಎಂಬ ರಿಯಾಲಿಟಿ ಶೋನಲ್ಲಿ ತೊಡಗಿಕೊಂಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಯಾನಾಗೆ ಚಡ್ಡಿಗಳನ್ನು ಬಳುವಳಿಯಾಗಿ ನೀಡಲಾಯಿತು. ಆದರೆ ಯಾನಾ ಗುಪ್ತಾ ಯಾವುದೇ ಅಳುಕಿಲ್ಲದೆ ಈ ಉಡುಗೊರೆಗಳನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದಾರೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲೂ ಯಾನಾ ಗುಪ್ತಾ ಈ ಬಗ್ಗೆ ಒಂದೆರಡು ಸಾಲುಗಳನ್ನು ಗೀಚಿದ್ದಾರೆ. ಅದೇನೆಂದರೆ, "ಕ್ರಿಸ್ಮಸ್ ಉಡುಗೊರೆಯಾಗಿ ಚಡ್ಡಿಗಳನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಹೊಸ ವರ್ಷದಲ್ಲಿ ಈ ರೀತಿಯ ಯಾವುದೇ ಎಡವಟ್ಟುಗಳು ನಡೆಯುವುದಿಲ್ಲ ಎಂಬ ಭರವಸೆಯನ್ನು ನೀಡುತ್ತಿದ್ದೇನೆ" ಎಂದಿದ್ದಾರೆ. [ಯಾನಾ ಗುಪ್ತಾ]

English summary
The item girl Yana Gupta who is presently rehearsing and performing on the dance reality show Jhalak Dikhla Jaa, informs that she has got some boxes of panties from her fans and friends as a Christmas and New year gift for her.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada