»   »  ಚಿತ್ರರಂಗಕ್ಕೆ ಆಯೇಷಾ ಟಕಿಯಾ ವಿದಾಯ?

ಚಿತ್ರರಂಗಕ್ಕೆ ಆಯೇಷಾ ಟಕಿಯಾ ವಿದಾಯ?

Subscribe to Filmibeat Kannada

ಹಿಂದಿ ಚಿತ್ರರಂಗದ ಬೆಡಗಿ ಆಯೇಷಾ ಟಕಿಯಾ ಚಿತ್ರರಂಗದಿಂದ ದೂರವಾಗುತ್ತಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ಫರ್ಹಾನ್ ಅಜ್ಮಿಯೊಂದಿಗೆ ಮದುವೆಯಾದ ಬಳಿಕ ಆಕೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬ ಪುಕಾರುಗಳು ಕೇಳಿಬರುತ್ತಿವೆ. ಈಗಾಗಲೇ ಆಕೆ ಒಪ್ಪಿಕೊಂಡಿರುವ ಚಿತ್ರಗಳನ್ನು ಶೀಘ್ರವಾಗಿ ಮುಗಿಸಿ ಸಂಪೂರ್ಣ ಸಮಯವನ್ನು ಕುಟುಂಬದವರೊಂದಿಗೆ ಕಳೆಯಲು ತೀರ್ಮಾನಿಸಿರುವುದಾಗಿ ಆಕೆಯ ಆಪ್ತರು ಹೇಳುತ್ತಿದ್ದಾರೆ.

ಆದರೆ ಆಯೇಷಾ ಮಾತ್ರ ಚಿತ್ರರಂಗ ಬಗ್ಗೆ ತಮಗೆ ಇನ್ನೂ ಒಲವಿದೆ ಎಂದು ಹೇಳಿದ್ದಾರೆ. ಚಿತ್ರೋದ್ಯಮದಲ್ಲಿ ಮತ್ತಷ್ಟು ಅವಕಾಶಗಳಿಗಾಗಿ ಆಕೆ ಪ್ರಯತ್ನಿಸುತ್ತಿದ್ದಾರೆ. ಇದೇ ವಿಷಯವನ್ನು ಆಯೇಷಾ ಟಕಿಯಾ ಬಳಿ ಪ್ರಸ್ತಾಪಿಸಿದರೆ ಆಕೆ ಸುದೀರ್ಘ ವಿವರಣೆಯನ್ನೂ ಕೊಡುತ್ತಾರೆ.

ನನಗೇನು ಅಂತಾ ವಯಸ್ಸಾಗಿದೆಯಂದು ಸಿನಿಮಾಗಳಲ್ಲಿ ನಟಿಸುವುದನ್ನು ಬಿಡಬೇಕು. ನನ್ನ ಭಾವಿ ಪತಿ ಸಹ ಸಿನಿಮಾ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸುವುದಿಲ್ಲ. ಅವರೇ ನನ್ನನ್ನು ಚಿತ್ರರಂಗದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುತ್ತಾರೆ.

ಕಾಜೋಲ್, ಐಶ್ವರ್ಯ ರೈ ಸಹ ಮದುವೆಯಾದ ಬಳಿಕವೂ ನಟಿಸುತ್ತಿಲ್ಲವೆ? ಅವರಿಗಿಂತಲೂ ನಾನೇನು ದೊಡ್ಡವಳಲ್ಲ. ಉತ್ತಮ ಅವಕಾಶಗಳು ಬಂದರೆ ಒಪ್ಪಿಕೊಳ್ಳಲು ಹಿಂದೆ ಮುಂದೆ ಆಲೋಚಿಸುವುದಿಲ್ಲ ಎನ್ನುತ್ತಾರೆ ಆಯೇಷಾ ಟಕಿಯಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada