Don't Miss!
- Sports
ಶ್ರೀಲಂಕಾ ವಿರುದ್ಧ ಟೆಸ್ಟ್ ಆಡುತ್ತಿದ್ದರೂ ಆಸಿಸ್ ನಾಯಕನ ಕಣ್ಣು ಭಾರತದ ಮೇಲೆ!
- News
ತರಗತಿಯಲ್ಲಿ ಒಬ್ಬ ಶಿಕ್ಷಕ ಇಬ್ಬರು ಶಿಕ್ಷಕಿಯರೊಂದಿಗೆ ಲವ್ವಿಡವ್ವಿ- ಅರೆಬೆತ್ತಲೆ ಫೋಟೋ ವೈರಲ್
- Finance
ಪಿಜಿಐಎಂ ಎಎಂಸಿ ಸಿಇಒ ಅಜಿತ್ ಮೆನನ್ ಸೇರಿ ನಾಲ್ವರಿಗೆ 36 ಲಕ್ಷ ರೂ. ದಂಡ ವಿಧಿಸಿದ ಸೆಬಿ
- Lifestyle
ಜುಲೈ 2022ರಲ್ಲಿ ವಿವಾಹಕ್ಕೆ ಪ್ರಾಶಸ್ತ್ಯ ದಿನ ಹಾಗೂ ಮುಹೂರ್ತ
- Automobiles
ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ
- Technology
ಸ್ಯಾಮ್ಸಂಗ್ ಟಿವಿ ಖರೀದಿಸುವವರಿಗೆ ಇದಕ್ಕಿಂತ ಬೆಸ್ಟ್ ಟೈಂ ಸಿಗೋದಿಲ್ಲ!
- Education
Cochin Shipyard Limited Recruitment 2022 : 330 ವೆಲ್ಡರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ರಾಮು 'ರಾಮಾಯಣ'ಕ್ಕೆ ನಟಿ ನಯನತಾರಾ ಸೀತೆ
ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಇನ್ನೇನು ಮದುವೆ ಮೂಡ್‌ನಲ್ಲಿರುವ ನಯನತಾರಾರನ್ನು ಮತ್ತೆ ಚಿತ್ರರಂಗಕ್ಕೆ ಎಳೆದುಕೊಂಡು ಬರುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಆಕೆಯನ್ನು ಮತ್ತೆ ಚಿತ್ರರಂಗಕ್ಕೆ ಕರೆತರುತ್ತಿರುವವರು ಬೇರಾರು ಅಲ್ಲ ರಾಮು ಎಂದು ಚಿರಪರಿಚಿತರಾಗಿರುವ ರಾಮ್ ಗೋಪಾಲ್ ವರ್ಮ.
ತೆಲುಗಿನಲ್ಲಿ 'ಶ್ರೀರಾಮ ರಾಜ್ಯಂ' ಎಂಬ ಚಿತ್ರದಲ್ಲಿ ಸೀತೆಯ ಪಾತ್ರ ಪೋಷಿಸಿ ಎಲ್ಲರ ಮೆಚ್ಚುಗೆಗೆಗೆ ನಯನತಾರಾ ಪಾತ್ರರಾಗಿದ್ದರು. ಆ ಚಿತ್ರವನ್ನು ಬಾಪು ಎಂಬ ಅದ್ಭುತ ನಿರ್ದೇಶಕರು ತೆರೆಗೆ ತಂದು ಪ್ರೇಕ್ಷಕರನ್ನು ಮೈಮರೆಸಿದ್ದರು. "ಮೂಳೆ ಇಲ್ಲದ ಮಾನವ" ಪ್ರಭುದೇವ ಕೈಹಿಡಿಯುವ ಸಿದ್ಧತೆಯಲ್ಲಿರುವ ನಯನತಾರಾ ಮದುವೆ ಮುಹೂರ್ತ ಯಾವಾಗ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಏತನ್ಮಧ್ಯೆ ಮರ್ಡರ್, ಸೆಕ್ಸು, ಕ್ರೈಮು ಎಂದು ಚಡಪಡಿಸುತ್ತಿದ್ದ ರಾಮ್ ಗೋಪಾಲ್ ವರ್ಮಾ ಮಹಾಕಾವ್ಯ 'ರಾಮಾಯಣ'ವನ್ನೇ ಈ ಬಾರಿ ಕೈಗೆತ್ತಿಕೊಂಡಿದ್ದಾರೆ. ರಾಮಾಯಣವನ್ನು ಮತ್ತೊಂದು ಮಗ್ಗುಲಿನಲ್ಲಿ ತೋರಿಸುವ ಪ್ರಯತ್ನ ಅವರದಂತೆ. ಈ ಚಿತ್ರದ ಸೀತೆ ನಯನತಾರಾ ಎಂಬುದು ಸದ್ಯದ ಮಾಹಿತಿ. (ಏಜೆನ್ಸೀಸ್)