»   » 'ಲಕ್ಕಿ' ನಟಿಯರಿಬ್ಬರ ಮಾರಾಮಾರಿ

'ಲಕ್ಕಿ' ನಟಿಯರಿಬ್ಬರ ಮಾರಾಮಾರಿ

Subscribe to Filmibeat Kannada

ವೃತ್ತಿಗೆ ಸಂಬಂಧಿಸಿದ ವೈಮನಸ್ಸಿನಿಂದಾಗಿ ಬಾಲಿವುಡ್ ನಟಿಮಣಿಯರಿಬ್ಬರ ನಡುವೆ ಮಾರಾಮಾರಿ ನಡೆದ ಘಟನೆ ಮುಂಬೈನ ಹೋಟೆಲೊಂದರಲ್ಲಿ ಭಾನುವಾರ ರಾತ್ರಿ ನಡೆದಿದೆ. ದಿ ಲಕ್ಕಿ 13 ಚಿತ್ರ ಪ್ರಮುಖ ನಾಯಕಿರಾದ ಸ್ವಪ್ನ ತಿವಾರಿ ಮತ್ತು ಜೆನ್ನಿಫರ್ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕೈಕೈ ಮಿಲಾಯಿಸಿ ಕಿತ್ತಾಡಿಕೊಂಡಿದ್ದಾರೆ. ಇದು ಜಂಭದ ಕೋಳಿಗಳು ಪರಸ್ಪರ ಪರಚಿಕೊಂಡ ಬಾಲಿವುಡ್ ಸುದ್ದಿ.

ಇವರಿಬ್ಬರು ಹೊಡೆದಾಟಕ್ಕೆ ವೇದಿಕೆಯಾಗಿದ್ದು ದಿ ಲಕ್ಕಿ 13 ಚಿತ್ರದ ಪತ್ರಿಕಾಗೋಷ್ಠಿ ಹಾಗೂ ಉಪಹಾರ ಕೂಟ. ಎದುರಿಗೆ ಮಾಧ್ಯಮ ಪ್ರತಿನಿಧಿಗಳಿರುವ ಪರಿವೆ ಇಲ್ಲದೆ ನಾಯಕಿಯರ ಹೊಡೆದಾಟದ ಸನ್ನಿವೇಶ ನಿರ್ದೇಶಕ ಮತ್ತು ನಿರ್ಮಾಪಕರ ತಲೆನೋವಾಗಿಸಿತು. ರಾಜ್ ವರ್ಮಾ ಥ್ರಿಲ್ಲರ್ ಚಿತ್ರವಾದ ಇದರಲ್ಲಿ ಸ್ವಪ್ನ ತಿವಾರಿ ಮತ್ತು ಜೆನ್ನಿಫರ್ ಪ್ರಮುಖ ನಿರ್ವಹಿಸಿದ್ದಾರೆ. ಚಿತ್ರ ಆರಂಭದಿಂದಲೂ ಈ ಇಬ್ಬರ ನಡುವೆ ಕೋಳಿ ಜಗಳ ಇದ್ದೆ ಇತ್ತು ಎನ್ನುವುದು ಚಿತ್ರತಂಡದ ದೂರು.

ಚಿತ್ರ ತಂಡದೊಂದಿಗೆ ಪಾರ್ಟಿಗೆ ಭಾಗವಹಿಸಿದ್ದ ಇವರಿಬ್ಬರು ಕಿತ್ತಾಡಿಕೊಂಡಿದ್ದು ಕೆಲಸಕ್ಕೆ ಬಾರದ ಸಂಗತಿಗೆ. ಸ್ವಪ್ನ ತನ್ನ ನೋಡಿ ನಕ್ಕಳು ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಜೆನ್ನಿಫರ್ ಕೈಯಲ್ಲಿದ್ದ ಗ್ಲಾಸ್ ನ್ನು ಸ್ವಪ್ನ ಕಡೆಗೆ ಎಸೆದು ಬಿಟ್ಟಿದ್ದಾಳೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ, ಶರಂಪರ ಜಗಳ, ನಿಂದನೆ ಎಲ್ಲವೂ ಮಾಧ್ಯಮಗಳ ಎದುರೆ ನಡೆಯಿತು.

ನಂತರ ಚಿತ್ರ ತಂಡ ಈ ಇಬ್ಬರು ನಟಿಯರನ್ನು ಸಮಾಧಾನಪಡಿಸಿ ಪಾರ್ಟಿಯ ಮಧ್ಯದಲ್ಲೇ ಮನೆಗೆ ಕಳುಹಿಸಿ ಕೊಟ್ಟು ಅನಾಹುತದಿಂದ ಬಜಾವ್ ಆಯಿತು. ಅಂದ ಹಾಗೆ, ರಾಜ್ ವರ್ಮಾ ಅವರ ಮಾಲೀಕತ್ವದ ರಾಜ್ ವರ್ಮಾ ಎಂಟರ್ ಟೇನ್ ಮೆಂಟ್ ರ ನಿರ್ಮಾಣದ, ಪ್ರವೀಣ್ ದೊಡೇಜಾ ನಿರ್ದೇಶನದ ಬಹುಭಾಷಾ ಪ್ರಯೋಗ ದಿ ಲಕ್ಕಿ 13 ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಇದೇ ಕಾರಣಕ್ಕೆ ಚಿತ್ರ ತಂಡ ಹಾಗೂ ಮಾಧ್ಯಮಗಳಿಗೆ ಪಾರ್ಟಿ ಏರ್ಪಡಿಸಲಾಗಿತ್ತು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada