»   » ಕಪ್ಪುಬಿಳುಪಿನಲ್ಲಿ ಬೆಳಕಾದ ದೀಪಿಕಾ ಪಡುಕೋಣೆ

ಕಪ್ಪುಬಿಳುಪಿನಲ್ಲಿ ಬೆಳಕಾದ ದೀಪಿಕಾ ಪಡುಕೋಣೆ

Subscribe to Filmibeat Kannada

ದೀಪಿಕಾ ಪಡುಕೋಣೆಯನ್ನು ಬೆತ್ತಲಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಸಾಮಾನ್ಯದ ಮಾತೆ. ಅಂತಹ ಸಾಹಸವನ್ನು ಖ್ಯಾತ ಛಾಯಾಗ್ರಾಹಕ ದಬೂ ರತ್ನಾನಿ ಮಾಡಿದ್ದಾರೆ. ತಮ್ಮ ಕ್ಯಾಮೆರಾದಲ್ಲಿ ದೀಪಿಕಾ ಪಡುಕೋಣೆಯ ಬೆತ್ತಲೆ ಚಿತ್ರವನ್ನು ಸೆರೆಹಿಡಿದ್ದಾರೆ!

ಆಶ್ಚರ್ಯಪಡುವಂತಹದ್ದೇನು ಇಲ್ಲ. ದಬೂ ರತ್ನಾನಿ ಹೊರತಂದಿರುವ 2010ನೇ ವರ್ಷದ ದಿನದರ್ಶಿಕೆಯಲ್ಲಿ ದೀಪಿಕಾ ತನ್ನ ಅಂಗಸೌಷ್ಟವನ್ನು ಪ್ರದರ್ಶಿಸಿದ್ದಾರೆ. ನೀಳ ಕಾಲ್ಗಳ ಸುಂದರಿಯ ಜತೆಗೆ ಹಲವಾರು ಬಾಲಿವುಡ್ ನಟ, ನಟಿಯರು ಕ್ಯಾಮೆರಾಗೆ ಮುಖ ಕೊಟ್ಟಿದ್ದಾರೆ. ಆದರೆ ಅವರಾರು ನಗ್ನವಾಗಿ ಮೈದೋರಿಲ್ಲ.

ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಪ್ರಿಯಾಂಕ ಚೋಪ್ರಾ, ಹೃತಿಕ್ ರೋಶನ್, ಸಲ್ಮಾನ್ ಖಾನ್, ಕಂಗನಾ ರನೌತ್, ಸೈಫ್ ಆಲಿಖಾನ್, ಕರೀನಾ ಕಪೂರ್, ಕಾಜೋಲ್, ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ, ಕತ್ರಿಕಾ ಕೈಫ್ ಮತ್ತು ಸೋನಂ ಕಪೂರ್ ಸಹ ದಿನದರ್ಶಿಕೆಯಲ್ಲಿ ಸ್ಥಾನ ಪಡೆದಿದ್ದಾರೆ.

ಆಶ್ಚರ್ಯವೆಂದರೆ ಈ ದಿನದರ್ಶಿಕೆಯಲ್ಲಿ ಸಲ್ಲು ಅಂಗಿ ಕಳಚದೆ ಪೋಸ್ ನೀಡಿರುವುದು. ಇದೇ ಮೊದಲ ಬಾರಿಗೆ ಇಮ್ರಾನ್ ಖಾನ್, ಜೆನಿಲಿಯಾ ಡಿಸೋಜಾ ಮತ್ತು ಅಸಿನ್ ಈ ಕ್ಯಾಲೆಂಡರನ್ನು ಅಲಂಕರಿಸಿದ್ದಾರೆ. ಕೇವಲ ಕಪ್ಪು ಬಿಳುಪು ಛಾಯಾಚಿತ್ರಗಳನ್ನು ಮಾತ್ರ ಈ ದಿನದರ್ಶಿಕೆ ಒಳಗೊಂಡಿರುವುದು ಮತ್ತೊಂದು ವಿಶೇಷ.

ಸೋಫಾ ಮೇಲೆ ಮಲಗಿದ ಭಂಗಿಯಲ್ಲಿರುವ ದೀಪಿಕಾ ಸಂಪೂರ್ಣ ಬೆತ್ತಲಾಗಿದ್ದಾರೆ. ಅಶ್ಲೀಲತೆಯ ಚೌಕಟ್ಟನ್ನ್ನು ಮೀರದೆ ಕಾಮದ ಚೌಕಟ್ಟಿನಲ್ಲಿ ದೀಪಿಕಾರನ್ನು ಬಂಧಿಸಿದ್ದೇನೆ ಎನ್ನುತ್ತಾರೆ ಛಾಯಾಗ್ರಾಹಕ ರತ್ನಾನಿ. ಕಳೆದ ವರ್ಷಇದೇ ದಿನದರ್ಶಿಕೆಗಾಗಿ ದೀಪಿಕಾ ಸೀರೆಯುಟ್ಟು ಕ್ಯಾಮೆರಾ ಕಣ್ಣಿಗೆ ಮೈಯೊಡ್ಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada