»   »  ಶಾರುಖ್ಖಿಗೆ ಭೂಗತ ಪಾತಕದ ಸೋಂಕು?

ಶಾರುಖ್ಖಿಗೆ ಭೂಗತ ಪಾತಕದ ಸೋಂಕು?

Subscribe to Filmibeat Kannada

ಅಮೆರಿಕಾದ ನ್ಯೂವರ್ಕ್ ವಿಮಾನ ನಿಲ್ದಾಣದಲ್ಲಿ ಶಾರುಕ್ ಖಾನ್ ಅವರನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ ಘಟನೆ ನಡೆದಾಗಿನಿಂದ ಒಂದು ಬಗೆಯ ಅನುಮಾನ, ಗುಲ್ಲು, ಗಾಸಿಪ್ಪು ಬಾಲಿವುಡ್ ಅಂಗಳದಲ್ಲಿ ಗಿರಕಿ ಸುತ್ತುತ್ತಿದೆ. ಈ ಘಟನೆಗೂ ಭೂಗತ ಪ್ರಪಂಚದ ಆಗುಹೋಗುಗಳಿಗೂ ನಿಕಟ ಸಂಬಂಧ ಇದೆಯೇ ಎಂಬ ಅನುಮಾನಗಳು ತಲೆದೋರಿವೆ. ಮುಖ್ಯವಾಗಿ ಅಮೆರಿಕಾದಲ್ಲಿ ಶಾರುಖ್ ಅವರಿಗೂ ಕಾರ್ಯಕ್ರಮ ಆಯೋಜಕರಿಗೂ ಅಂಡರ್ ವರ್ಲಡ್ ಘಾತುಕ ಶಕ್ತಿಗಳಿಗೂ ತ್ರಿಕೋಣ ನೆಂಟಸ್ತನ ಇರಬಹುದೆ ಎಂಬ ಗುಸುಗುಸು ಗಾಳಿ ಬೀಸುತ್ತಿದೆ.

ಅಮೆರಿಕಾ ಕಾರ್ಯಕ್ರಮದ ನಿರ್ವಾಹಕರಿಗೂ ಭೂಗತ ಶಕ್ತಿಗಳಿಗೂ ಪರಸ್ಪರ ಸಂಬಂಧಗಳು ಇದ್ದುದರಿಂದಲೇ ಶಾರುಖ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಅಡ್ಡಗಾಲು ಹಾಕಿ ನಿಲ್ಲಿಸಲಾಯಿತೆಂಬುದು ಒಂದು ವಾದ. ಆದರೆ, ಸೌತ್ ಏಷಿಯಾ ಕಾರ್ನಿವಾಲ್ ಕಾರ್ಯಕ್ರಮದ ಆಯೋಜಕರಾದ ಫರ್ ಹತ್ ಹುಸೇನ್ ಈ ವಾದವನ್ನು ತಳ್ಳಿಹಾಕಿದ್ದಾರೆ. ಹಾಗೇನಾದರೂ ಇದ್ದಿದ್ದರೆ ತಮ್ಮನ್ನು ಹಾಗೂ ತಮ್ಮ ಸೋದರನನ್ನು ಮೊದಲು ಪ್ರಶ್ನಿಸಬೇಕಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ತಾವು ಅಮೆರಿಕಾದಲ್ಲಿ ಕಳೆದ 25 ವರ್ಷಗಳಿಂದ ನೆಲೆಸಿರುವುದಾಗಿಯೂ ಹಾಗೂ ಸ್ವತಃ ತಾವೇ ಮುಂಬೈನ ಗ್ಯಾಂಗ್ ಸ್ಟರ್ ಅಬು ಸಲೀಂ ಕಡೆಯಿಂದ ಸುಲಿಗೆ ಬೆದರಿಕೆಗಳನ್ನು ಸ್ವೀಕರಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ. ಬಾಲಿವುಡ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇತರ ಅಮೆರಿಕಾ ವಾಸಿ ವಾಣಿಜ್ಯೋದ್ಯಮಿಗಳು ಕೂಡ ಈ ವಾದವನ್ನು ನಿರಾಕರಿಸಿದ್ದಾರೆ. ಬಾಲಿವುಡ್ ರಂಜನೆ ಕಾರ್ಯಕ್ರಮಗಳಿಂದ ತಮಗೆ ಲಭ್ಯವಾಗುವುದು ಅಬ್ಬಬ್ಬಾ ಎಂದರೆ ಶೇಕಡಾ ಏಳೋ ಎಂಟೋ ಮಾತ್ರ ಎಂಬ ಸಮಜಾಯಿಷಿ ನೀಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada