»   »  'ಸ್ಲಂ ಡಾಗ್ ಮಿಲಿಯನೇರ್' ನಟಿಯ ಆತ್ಮಕತೆ

'ಸ್ಲಂ ಡಾಗ್ ಮಿಲಿಯನೇರ್' ನಟಿಯ ಆತ್ಮಕತೆ

Posted By:
Subscribe to Filmibeat Kannada
Slumdog Millionaire actro Rubina Ali
ಸ್ಲಂಡಾಗ್ ಮಿಲಿಯನೇರ್ ಚಿತ್ರದ ಸ್ಟಾರ್ ಒಂಬತ್ತರ ಹರೆಯದ ರುಬೀನಾ ಆಲಿ ತಮ್ಮ ಆತ್ಮಕಥೆಯನ್ನು ಹೊರತರುತ್ತಿದ್ದಾರೆ! ಪುಸ್ತಕ ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. Slumdog Dreaming: My Journey to the Stars ಎಂಬ ಪುಸ್ತಕ ಏಕಕಾಲಕ್ಕೆ ಬ್ರಿಟನ್ ಮತ್ತು ಯುಎಸ್ ನಲ್ಲಿ ಜುಲೈ 16ರಂದು ಅನಾವರಣಗೊಳ್ಳಲಿದೆ.

ರುಬೀನಾಳ ಮುಂಬೈ ಜೀವನ, ಗರೀಬ್ ನಗರದಲ್ಲಿ ಗೋಲಿ ಆಟ ಆಡಿದ್ದು, ತನ್ನ ಗೆಳೆಯರೊಂದಿಗೆ ಕಳೆದ ದಿನಗಳು. ಹಳೆ ಟೆಲಿವಿಷನ್ ಸೆಟ್ ನಲ್ಲಿ ತನ್ನದೇ ನಟನೆಯ ಸ್ಲಂ ಡಾಗ್ ಚಿತ್ರವನ್ನು ವೀಕ್ಷಿಸಿದ ಘಟನೆಗಳನ್ನು ರುಬೀನಾ ಹೇಳಿಕೊಂಡಿದ್ದಾರೆಂದು ಪ್ರಕಾಶಕರು ತಿಳಿಸಿದ್ದಾರೆ.

ಹಾಗೆಯೇ 'Jai ho", 'cuddies" and 'slumdog" ಎಂಬ ಪದಗಳು 'ಇಂಗ್ಲಿಷ್ ಲಾಂಗ್ವೇಜ್ ವರ್ಲ್ಡ್ ಕ್ಲಾಕ್' ಎಂಬ ನಿಘಂಟಿಗೆ ಹೊಸದಾಗಿ ಸೇರ್ಪಡೆಯಾಗಲಿವೆ. ಜೂನ್ 10ರಂದು ಈ ಪದಗಳನ್ನು ನಿಘಂಟಿನಲ್ಲಿ ಸೇರಿಸಲಾಗುತ್ತಿದೆ. ಈ ಮೂಲಕ 'ಜೈ ಹೋ' ಪದ ಆಂಗ್ಲದಲ್ಲಿ ಮಿಲಿಯನ್ ಪದವಾಗಿ ಸೇರ್ಪಡೆಯಾಗಲಿದೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada