»   » ಮದುವೆಗೆ ಮುನ್ನ ನನಗೆ ಮಗು ಬೇಡ; ದೀಪಿಕಾ

ಮದುವೆಗೆ ಮುನ್ನ ನನಗೆ ಮಗು ಬೇಡ; ದೀಪಿಕಾ

Posted By:
Subscribe to Filmibeat Kannada

ಮಂಗಳೂರು ಮಲ್ಲಿಗೆ ದೀಪಿಕಾ ಪಡುಕೋಣೆ ಬಾಲಿವುಡ್ ಬಣ್ಣದ ಜಗತ್ತಿನಲ್ಲಿ ಸದಾ ಸುದ್ದಿಯಲ್ಲಿರುವ ಹುಡುಗಿ. ಪ್ರಸ್ತುತ ಆಕೆ 'ಬ್ರೇಕ್ ಕೆ ಬಾದ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಾರಿಷಸ್ ನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಫಿಲಂಫೇರ್ ನಿಯತಕಾಲಿಕೆ ದೀಪಿಕಾರನ್ನು ಮಾತಿಗೆಳೆದಾಗ ಆಕೆ ಅದೂ ಇದೂ ಹೇಳಿ ಅಂತರಂಗ ಶುದ್ಧಿ ಮಾಡಿಕೊಂಡಿದ್ದಾರೆ.

ಸಹ-ಜೀವನ (ಲೀವ್ ಇನ್ ರಿಲೇಷನ್ ಶಿಪ್) ಬಗ್ಗೆ ದೀಪಿಕಾ ಅವರದ್ದೇನು ತಕರಾರಿಲ್ಲವಂತೆ. ಆದರೆ ಆ ರೀತಿಯ ಸಹ-ಜೀವನ ಪದ್ಧತಿಯನ್ನು ನಾನು ಮಾತ್ರ ಸ್ವೀಕರಿಸುವುದಿಲ್ಲ. ಅದು ಅವರವರ ಇಚ್ಛೆಗೆ ಸಂಬಂಧಿಸಿದ್ದು . ಆದರೆ ಮುದುವೆ ಮುನ್ನ ಒಟ್ಟಿಗೆ ವಾಸಿಸುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ.

ಪ್ರೀತಿಸುವುದರಲ್ಲಿ ನನಗೆ ನಂಬಿಕೆಯಿದೆ. ಪ್ರೀತಿ ಎಂದರೆ ಸ್ನೇಹ, ನಂಬಿಕೆ, ಪರಸ್ಪರ ಗೌರವ, ಪ್ರಾಮಾಣಿಕತೆ ಹಾಗೂ ಹೊಂದಾಣಿಕೆ ಇರಬೇಕು. ಪರಸ್ಪರ ಗೌರವ ಭಾವನೆ ಬಹುಮುಖ್ಯ ಎನ್ನುತ್ತಾರೆ ದೀಪಿಕಾ. ಒಂದು ವೇಳೆ ಈ ಗುಣಗಳುಳ್ಳ ಹುಡುಗ ಸಿಕ್ಕಿದರೆ ಸ್ವತಃ ತಾವೇ ಹೋಗಿ ಐ ಲವ್ ಯು ಎಂದು ಹೇಳುವುದಿಲ್ಲ. ನಾನು ಪಕ್ಕಾ ಸಂಪ್ರದಾಸ್ಥ ಮನೆತನದಿಂದ ಬಂದವಳು ಎನ್ನುತ್ತಾರೆ.

ಅದೆಲ್ಲಾ ಸರಿ ಮದುವೆಗೆ ಮುನ್ನ ಮಗು ಪಡೆಯುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಲಾಗಿ, ಇದೆಲ್ಲಾ ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಕಾಲೇಜಿಗೆ ಬಂಕ್ ಹೊಡೆದದ್ದು, ಕದ್ದುಮುಚ್ಚಿ ಗೆಳತಿಯರ ಜೊತೆ ಪಾರ್ಟಿ ಮಾಡಿದ್ದು ತನ್ನ ಜೀವನದ ತುಂಟ ಘಟನೆಗಳೆಂದು ಹೇಳಿ ದೀಪಿಕಾ ತುಂಟ ನಗೆ ನಕ್ಕ್ಕಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada