»   » ಶಿರಡಿಯಲ್ಲಿ ಸಿಂಪ್ಲಿ ಸಿಟ್ಟಾದ ಹೃತಿಕ್

ಶಿರಡಿಯಲ್ಲಿ ಸಿಂಪ್ಲಿ ಸಿಟ್ಟಾದ ಹೃತಿಕ್

Posted By:
Subscribe to Filmibeat Kannada

ಬಾಲಿವುಡ್‌ನ ಮ್ಯಾಚೋಮ್ಯಾನ್, ಮರ್ಯಾದಾ ಪುರುಷೋತ್ತಮ ಹೃತಿಕ್ ರೋಷನ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಸಿಟ್ಟಾಗಿದ್ದಾರೆ.ತನ್ನ ಹಾಗೂ ಕುಟುಂಬದ ಏಕಾಂತಕ್ಕೆ ಭಂಗ ತಂದ ಮಾಧ್ಯಮ ಮಂದಿ ವಿರುದ್ಧ ತಿರುಗಿಬಿದ್ದು, ಕೆಲಹೊತ್ತಿನಲ್ಲೇ ಕ್ಷಮೆ ಕೂಡಾ ಯಾಚಿಸಿದ್ದಾರೆ. ಇತ್ತೀಚೆಗೆ ಎಲ್ಲಾ ಸ್ಟಾರ್ ಗಳು ಮಾಡುವಂತೆ ಟ್ವೀಟ್ಟರ್ ನಲ್ಲೂ ಈ ಘಟನೆಬಗ್ಗೆ ಪ್ರಸ್ತಾಪ ಮಾಡಿ, ವಿಷಾದ ವ್ಯಕ್ತಪಡಿಸಿದ್ದಾರೆ.

ಹೃತಿಕ್, ಬರ್ಬರಾ ಮೋರಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೈಟ್ಸ್ ಶೀಘ್ರದಲ್ಲಿ ತೆರೆ ಮೇಲೆ ಬರಲು ಸಿದ್ಧವಾಗಿದೆ. ತಂದೆ ರಾಕೇಶ್, ತಾಯಿ ಪಿಂಕಿ ಹಾಗೂ ಪತ್ನಿ ಸುಸೈನಾ ಜತೆಗೂಡಿ ಶಿರಡಿ ಸಾಯಿಬಾಬಾನ ಆರ್ಶೀವಾದ ಪಡೆದು ಸಿನಿಮಾದ ಯಶಸ್ಸಿಗಾಗಿ ಪೂಜೆ ಸಲ್ಲಿಸಲು ಹೃತಿಕ್ ಆಗಮಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ, ಮಾಧ್ಯಮ ಪ್ರತಿನಿಧಿಗಳು ಅಲ್ಲಿಗೆ ದೌಡಾಯಿಸಿದೆ. ಅಲ್ಲದೇ ಕೆಲ ಛಾಯಾಗ್ರಾಹಕರು ಹೃತಿಕ್ ಕುಟುಂಬಸದಸ್ಯರ ಫೋಟೋ ತೆಗೆಯಲು ಮುಂದಾದರು.

ವಿಡಿಯೋ: ಕೈಟ್ಸ್ ಚಿತ್ರದ ಟ್ರೈಲರ್

ವಿಡಿಯೋ: ಹೃತಿಕ್, ಬಾರ್ಬರಾ ರೋಮಾನ್ಸ್
ವಿಡಿಯೋ: ಹೃತಿಕ್  ಸಾಹಸಮಯ ದೃಶ್ಯಗಳು

ಮನಃಶಾಂತಿಗೆ ಬಾಬಾನ ಬಳಿ ಬಂದರೆ ಅದಕ್ಕೂ ಭಂಗ ಬಂದಿತಲ್ಲ ಎಂದು ಕೋಪಗೊಂಡ ಹೃತಿಕ್ ಕ್ಯಾಮರಾಮನ್‌ಗಳ ಮೇಲೆ ಏಕಾಎಕಿ ದಾಳಿ ನಡೆಸಿದರು. ಪುತ್ರನ ಅವತಾರ ಕಂಡು ವಿಚಲಿತರಾದರೂ, ಪರಿಸ್ಥಿತಿ ಗಂಭೀರತೆ ಅರಿತ ರಾಕೇಶ್ ರೋಶನ್ ಕೂಡಲೇ ಹೃತಿಕ್‌ನನ್ನ್ನು ಸಮಾಧಾನಪಡಿಸಿ ಕ್ಷಮೆಯಾಚುವಂತೆ ಮಾಡಿದರು. ಒಟ್ಟಾರೆ ದೊಡ್ಡದಾಗಬೇಕಿದ್ದ ವಿವಾದ ರಾಕೇಶ್ ಮಧ್ಯಸ್ಥಿಕೆ ಮೂಲಕ ಅಂತ್ಯ ಕಂಡಿತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada