»   »  ಬಿಪಶಾ ಬಸು ಎದೆ ತಡವಿ ಪೇರಿಕಿತ್ತ ಕಿಡಿಗೇಡಿ!

ಬಿಪಶಾ ಬಸು ಎದೆ ತಡವಿ ಪೇರಿಕಿತ್ತ ಕಿಡಿಗೇಡಿ!

Subscribe to Filmibeat Kannada

ಬಾಲಿವುಡ್ ಬೆಡಗಿ ಬಿಪಶಾ ಬಸುಗೆ ಕನಸಿನಲ್ಲೂ ಬೆಚ್ಚಿಬೀಳುವಂತಾ ಘಟನೆ ನಡೆದಿದೆ. ದುರ್ಗಾಪೂಜೆ ಸಂದರ್ಭದಲ್ಲಿ ಹಠಾತ್ ಆಗಿ ಕಿಡಿಗೇಡಿಯೊಬ್ಬ ಆಕೆಯ ಎದೆಗೆ ಕೈಹಾಕಿದ ಘಟನೆ ಮುಂಬೈನಲ್ಲಿ ನಡೆದಿದೆ. ಅದೂ ಆಕೆಯ ಪ್ರಿಯಕರ ಜಾನ್ ಅಬ್ರಹಾಂ ಜತೆಗಿದ್ದಾಗಲೇ!

ಘಟನೆಯ ಪೂರ್ಣ ವಿವರಗಳು ಹೀಗಿವೆ. ದುರ್ಗಾಪೂಜೆ ನಿಮಿತ್ತ ಉತ್ತರ ಬಾಂಬೆಯಲ್ಲಿನ ದುರ್ಗಾ ಮಂದಿರಕ್ಕೆ ತನ್ನ ಪ್ರಿಯಕರ ಜಾನ್ ಅಬ್ರಹಾಂರೊಂದಿಗೆ ಬಿಪಶಾ ಭೇಟಿಕೊಟ್ಟಿದ್ದರು. ಇದಕ್ಕಿದ್ದಂತೆ ಆಗಂತುಕನೊಬ್ಬ ಹಠಾತ್ತನೆ ಬಿಪಶಾರ ಎದೆಗೆ ಕೈಹಾಕಿ ತಡವಿ ಬಳಿಕ ಓಡಿಹೋಗಿದ್ದಾನೆ. ಏನಾಯಿತು ಎಂದು ನೋಡುವಷ್ಟರಲ್ಲೇ ಜನಸಂದಣಿಯಲ್ಲಿ ಕಿಡಿಗೇಡಿ ನಾಪತ್ತೆಯಾಗಿದ್ದ.

ಈ ಘಟನೆಯಿಂದ ಬಿಪಶಾ ಮತ್ತು ಜಾನ್ ಅಬ್ರಹಾಂ ಇಬ್ಬರೂ ತೀವ್ರವಾಗಿ ನೊಂದುಕೊಂಡಿದ್ದಾರೆ. ಬಳಿಕ ಅವರಿಬ್ಬರೂ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರಿಬ್ಬರೂ ಮಂದಿರಕ್ಕೆ ಭೇಟಿ ನೀಡಿದ್ದಾಗ ಸಂಜೆಗತ್ತಲು ಕವಿಯುತ್ತಿತ್ತು. ಕಿಡಿಗೇಡಿಯೊಬ್ಬನ ಕಾರಣ ಒಂದು ಸುಂದರ ಸಂಜೆ ಪ್ರೇಮಿಗಳ ಪಾಲಿಗೆ ಕರಾಳ ಸಂಜೆಯಾಗಿ ಮಾರ್ಪಟ್ಟಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada