»   » ಕರಣ್ ಜೋಹಾರ್ ಚಿತ್ರದಲ್ಲಿ ನಟ ಧ್ಯಾನ್

ಕರಣ್ ಜೋಹಾರ್ ಚಿತ್ರದಲ್ಲಿ ನಟ ಧ್ಯಾನ್

Subscribe to Filmibeat Kannada

'ಅಮೃತಧಾರೆ' ಹರಿಸಿದ ನಮ್ಮ ಪ್ರೀತಿಯ ಹುಡುಗ ಧ್ಯಾನ್(ಸಮೀರ್ ದತ್ತಾನಿ) ನಟಿಸಿರುವ ಹಿಂದಿ ಚಿತ್ರ 'ಐ ಹೇಟ್ ಲವ್ ಸ್ಟೋರಿ' ಈಗಾಗಲೆ ಚಿತ್ರೀಕರಣ ಮುಗಿಸಿಕೊಂಡಿದೆ. ಕರಣ್ ಜೋಹಾರ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಹಾಗೆಯೇ ದುಬೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಲು ಧ್ಯಾನ್ ದುಬೈಗೆ ಹಾರಿದ್ದಾರೆ.

ಶಾಮ್ ಬೆನಗಲ್ ನಿರ್ದೇಶಿಸಿರುವ 'ವೆಲ್ ಡನ್ ಅಬ್ಬ' ಎಂಬ ಚಿತ್ರದಲ್ಲಿ ಧ್ಯಾನ್ ನಟಿಸಿದ್ದು, ಈ ಚಿತ್ರ ದುಬೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಕರಣ್ ಜೋಹಾರ್ ಚಿತ್ರದಲ್ಲಿ ನಟಿಸಿರುವ ಖುಷಿ ಒಂದೆಡೆಯಾದರೆ ಶಾಮ್ ಬೆನಗಲ್ ಚಿತ್ರದಲ್ಲಿ ನಟಿಸಿರುವ ಸಂತಸ ಮತ್ತೊಂದೆಡೆ. ಒಟ್ನಲ್ಲಿ ಧ್ಯಾನ್ 'ಜಾಕ್ ಪಾಟ್' ಹೊಡೆದಿದ್ದಾರೆ.

ಏತನ್ಮಧ್ಯೆ ಧ್ಯಾನ್ ನಟಿಸಲಿರುವ ಕನ್ನಡದ 'ಸಿಹಿ ಮುತ್ತು' ಚಿತ್ರ 2010ರ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ. ಬಾಲಿವುಡ್ ನಲ್ಲಿ ಒಂದೊಂದೇ ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಕಾರಣ ಮುಂಬೈನಲ್ಲೂ ಧ್ಯಾನ್ ಮನೆ ಮಾಡಿದ್ದಾರೆ. ಮೊನಲಿಸಾ, ಅಮೃತಧಾರೆ, ಜೂಟಾಟ, ಜಾಕ್ ಪಾಟ್, ಸಜನಿ ಮತ್ತು ನೀನೆ ನೀನೆ ಧ್ಯಾನ್ ನಟಿಸಿದ ಕನ್ನಡ ಚಿತ್ರಗಳು.

ಮುಖ್ ಬೀರ್, ಧೂಮ್ ಧಡಾಕ, ಮಾರಥಾನ್, ಲೈಫ್ ಮೆ ಕಭಿ ಕಭಿ, ಕಾರ್ಪೊರೇಟ್, ಪ್ಯಾರ್ ಮೆ ಟ್ವಿಸ್ಟ್ ಮತ್ತು ಉಫ್ ಕ್ಯಾ ಜಾದೂ ಮೊಹಬ್ಬ್ಬತ್ ಹೈ ಹಿಂದಿ ಚಿತ್ರಗಳಲ್ಲಿ ಧ್ಯಾನ್ ನಟಿಸಿದ್ದಾರೆ. ಅತ್ತ ಹಿಂದಿ, ಇತ್ತ್ತ ಕನ್ನಡ ಹಾಗೂ ತಮಿಳಿನಲ್ಲೂ ಧ್ಯಾನ್ ಬ್ಯುಸಿಯಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada