For Quick Alerts
  ALLOW NOTIFICATIONS  
  For Daily Alerts

  ದೇದ್ ಇಶ್ಕಿಯಾಕ್ಕೆ ಮಾಧುರಿ ಹಾಯ್, ವಿದ್ಯಾ ಬಾಯ್

  |

  ದೇದ್ ಇಶ್ಕಿಯಾ (Dedh Isqiya) ಚಿತ್ರದಲ್ಲಿ ನಟಿ ಮಾಧುರಿ ದೀಕ್ಷಿತ್ ನಟಿಸಲಿರುವುದು ಪಕ್ಕಾ ಆಗಿದೆ. ಈ ವಿಷಯವನ್ನು ಸ್ವತಃ ಮಾಧುರಿ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ. ಬಹಳಷ್ಟು ದಿನಗಳಿಂದ ಈ ಚಿತ್ರದಲ್ಲಿ ಮಾಧುರಿ ನಟಿಸುತ್ತಾರೋ ಅಥವಾ ವಿದ್ಯಾ ಬಾಲನ್ನೋ ಎಂಬುದು ಗೊಂದಲದ ಗೂಡಾಗಿಯೇ ಇತ್ತು. ಆದರೀಗ ಅದು ಮಾಧುರಿ ಎಂಬುದು ಕನ್ಫರ್ಮ್ ಆಗಿದೆ.

  ಮಾಧುರಿ ಮ್ಯಾನೇಜರ್ ಹೇಳುವಂತೆ ಮಾಧುರಿ ಮಾತ್ರ ಈ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ. ಹಾಗಾಗಿ ಅವರಿಗೇ ಕಾಯುತ್ತಿದ್ದರಂತೆ. ಬಹಳ ಸಮಯದ ನಂತರ ಈ ವಿಷಯವನ್ನು ಮಾಧುರಿಗೆ ಹೇಳಲಾಗಿ ಅವರು ಖುಷಿಯಿಂದ ತಕ್ಷಣ ಒಪ್ಪಿಕೊಂಡರಂತೆ. ಈಗ ವಿದ್ಯಾ ಬಾಲನ್ ಹೆಸರು ಈ ಚಿತ್ರದಿಂದ ಔಟ್ ಆಗಿದೆ. ಅಂದಹಾಗೆ, ಈ ಚಿತ್ರದಲ್ಲಿಯ ಪಾತ್ರವೊಂದಕ್ಕೆ ಕಂಗನಾ ರಣಾವತ್ ಅರ್ಷದ್ ವರ್ಸಿ ಜತೆಯಾಗಿ ನಟಿಸಲಿದ್ದಾರೆ.

  ಆದರೆ ಸುದ್ದಿ ಮೂಲಗಳು ಹೇಳುವ ಪ್ರಕಾರ ವಿದ್ಯಾ ಬಾಲನ್ ಒಂದೇ ರೀತಿಯ ಪಾತ್ರವನ್ನು ಮತ್ತೆ ಎರಡನೇ ಬಾರಿಗೆ ಮಾಡಲು ಇಷ್ಟಪಡುವುದಿಲ್ಲವಂತೆ. ನಾಸೀರುದ್ದೀನ್ ಎದುರು ನಟಿಸಬೇಕಾಗಿರುವ ಈ ಅವಿಸ್ಮರಣೀಯ ಶಶಿ ಬೇಗಂ ಪಾತ್ರವನ್ನು ಮಾಡಲು ಸ್ವತಃ ವಿದ್ಯಾರೇ ಇಷ್ಟಪಡುತ್ತಿಲ್ಲವಂತೆ. ಏನೇ ಆಗಲಿ, ಮಾಧುರಿ ಅಭಿಮಾನಿಗಳಿಗೆ ಮತ್ತೊಂದು ಹಬ್ಬ ಕಾದಿದೆ. (ಏಜೆನ್ಸೀಸ್)

  English summary
  In a recent interview, Madhuri Dixit's manager confirmed that Madhuri has replaced Vidya Balan in Dedh Isqiya.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X