Just In
Don't Miss!
- News
45 ಲಕ್ಷ ಟನ್ ಭತ್ತ ಖರೀದಿಸುವಂತೆ ಕೇಂದ್ರಕ್ಕೆ ಮನವಿ: ಗೋಪಾಲಯ್ಯ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Sports
ಐಪಿಎಲ್ ಆಟಗಾರರ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಸೇರ್ಪಡೆ?
- Automobiles
ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್
- Lifestyle
ಸ್ಟ್ರಾಬೆರ್ರಿ ಮಿಲ್ಕ್ ಶೇಕ್ ತುಂಬಾ ರುಚಿಯಾಗಿ ಮಾಡುವುದು ಹೇಗೆ
- Education
ECIL Recruitment 2021: 19 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅರುವತ್ತೆಂಟರಲ್ಲೂ ಬಿಜಿ ಬಿಜಿ ಅಮಿತಾಬ್ ಬಚ್ಚನ್
ಬಾಲಿವುಡ್ ನಟ, ಬಿಗ್ ಬಿ ಅಮಿತಾಬ್ ಬಚ್ಚನ್ ಇಂದು (ಅ.11) 68ನೇ ವರ್ಷಕ್ಕೆ ಅಡಿಯಿಟ್ಟಿದ್ದಾರೆ. ಅರುವತ್ತೆಂಟು ಕೆ ಜಿ ತೂಕದ ಕೇಕನ್ನು ಕತ್ತರಿಸುವ ಮೂಲಕ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಕೊಂಡರು. ಅವರ ವಯೋಮಾನದ ನಟರೆಲ್ಲಾ ಚಿತ್ರರಂಗಕ್ಕೆ ನಿವೃತ್ತಿ ಘೋಷಿಸಿಕೊಂಡು ಬಹಳ ಕಾಲ ಸರಿದು ಹೋಗಿದೆ. ಆದರೆ ಅಮಿತಾಬ್ ಮಾತ್ರ ಇನ್ನೂ ಇಪ್ಪತ್ತರ ಹರೆಯದ ಹುಡುಗನಂತೆ ಚಿತ್ರರಂಗದಲ್ಲಿ ತೊಡಗಿಕೊಂಡಿರುವುದಅವರ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.
ಈ ವರ್ಷ ಅಮಿತಾಬ್ ಪಾಲಿಗೆ ಮಿಶ್ರಫಲ ನೀಡಿದೆ. ಅವರ ಅಭಿನಯದ ಕೆಲವು ಚಿತ್ರಗಳು ನೆಲಕಚ್ಚಿವೆ. ಇದೇ ಸಂದರ್ಭದಲ್ಲಿ 'ಕೌನ್ ಬನೇಗಾ ಕರೋಡ್‌ಪತಿ'ಯಂತಹ ಜನಪ್ರಿಯ ಕಾರ್ಯಕ್ರಮ ಮತ್ತೆ ಅವರ ಪಾಲಿಗೆ ಒದಗಿಬಂದಿದೆ. ಬಾಲಿವುಡ್ ನಲ್ಲಿ ಅವರು ಇನ್ನೇನು ನೇಪಥ್ಯಕ್ಕೆ ಸರಿಯಲಿದ್ದಾರೆ ಎಂಬ ಪರಿಸ್ಥಿತಿ ಉದ್ಭವವಾದಾಗ ಅವರ ನೆರವಿಗೆ ಬಂದಿದ್ದೇ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮ.
ತಮ್ಮ ಸ್ವಂತ ನಿರ್ಮಾಣದ 'ಪಾ' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ನಿರ್ಮಿಸಿತ್ತು. ಈ ವರ್ಷ ಅವರಿಗೆ ರಾಷ್ಟ್ರಪ್ರಶಸ್ತಿಯನ್ನೂ ತಂದುಕೊಟ್ಟಂತಹ ಚಿತ್ರವಿದು. 2008ರಲ್ಲಿ ಅಮಿತಾಬ್ ಆರೋಗ್ಯ ಕೈಕೊಟ್ಟಿತ್ತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆಗ ಅವರಿಗೆ 66 ವರ್ಷ ವಯಸ್ಸು. ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಳೆದ ಎರಡು ವರ್ಷಗಳಿಂದ ಅವರು ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕಲಿಲ್ಲ.
ಈ ವರ್ಷ ಅವರ ಕೈಯಲ್ಲಿ ರಾಜ್ ಕುಮಾರ್ ಸಂತೋಷಿ ಅವರ 'ಪವರ್' ಚಿತ್ರವಿದೆ. ಬಹುತಾರಾಗಣದ ಈ ಚಿತ್ರದಲ್ಲಿ ಸಂಜಯ್ ದತ್, ಅಜಯ್ ದೇವಗನ್ ಮತ್ತು ಅನಿಲ್ ಕಪೂರ್ ಸಹ ನಟಿಸುತ್ತಿದ್ದಾರೆ. ಇದರ ಜೊತೆಗೆ ಸೋನಿ ವಾಹಿನಿಯ 'ಕೌನ್ ಬನೇಗಾ ಕರೋಡ್‌ಪತಿ' ಇದ್ದೇ ಇದೆ. ತೆಲುಗಿನ 'ಬುದ್ಧ' ಹಾಗೂ ಪ್ರಕಾಶ್ ಝಾ ಅವರ 'ಅರಕ್ಷಣ್' ಚಿತ್ರಗಳಲ್ಲೂ ಅಭಿನಯಿಸಲಿದ್ದಾರೆ.