»   » ಕನಸಿನ ಕನ್ಯೆ ಮನೆಯಲ್ಲಿ ಕಳುವು; ಸಿಕ್ಕಿಬಿದ್ದ ಕಳ್ಳರು

ಕನಸಿನ ಕನ್ಯೆ ಮನೆಯಲ್ಲಿ ಕಳುವು; ಸಿಕ್ಕಿಬಿದ್ದ ಕಳ್ಳರು

Posted By:
Subscribe to Filmibeat Kannada

ಕೆಲ ದಿನಗಳ ಹಿಂದೆ ಭಾರತೀಯ ಚಿತ್ರರಂಗದ ಖ್ಯಾತ ತಾರೆ ಹೇಮಾಮಾಲಿನಿ ಅವರ ಮನೆಯಲ್ಲಿ ರು.80 ಲಕ್ಷ ಕಳುವಾಗಿತ್ತು. ಇದೀಗ ಹೇಮಾಮಾಲಿನಿ ಮನೆಯಲ್ಲಿ ಕಳುವು ಮಾಡಿದ್ದ ನೇಪಾಳಿ ಮೂಲದ ಐದು ಮಂದಿ ಕಳ್ಳರ ತಂಡವನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಮಾಲು ಸಮೇತ ಹಿಡಿದಿದ್ದಾರೆ. ಬಂಧಿತ ಕಳ್ಳರಿಂದ ಬೆಳೆಬಾಳುವ ವಸ್ತುಗಳು ಸೇರಿದಂತೆ ರು.10.9 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೇಮಾಮಾಲಿನಿ ಅವರ ಮುಂಬೈನ 'ದಿನ್ ದೋಷಿ' ಮನೆಯಲ್ಲಿ ರು.80 ಲಕ್ಷ ಕಳುವಾಗಿತ್ತು. ಈ ಸಂಬಂಧ ಅವರು ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಅಪರಾಧಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸರು ಕಡೆಗೂ ಸಫಲರಾಗಿದ್ದಾರೆ. ಹೇಮಾಮಾಲಿನಿ ಅವರ ನಿವಾಸದಿಂದ ಸುಮಾರು 10 ಕಿ.ಮೀ ದೂರದ ವಸತಿ ಸಮುಚ್ಛಯದಲ್ಲಿ ಕಳ್ಳರು ಪತ್ತೆಯಾಗಿದ್ದಾಗಿ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರಾಕೇಶ್ ಮಾರಿಯಾ ತಿಳಿಸಿದ್ದಾರೆ.

ದರೋಡೆಕೋರರ ಗುಂಪೊಂದು ಮನೆಯೊಂದರಲ್ಲಿ ಕಳ್ಳತನ ಮಾಡುವ ಬಗ್ಗೆ ನಮಗೆ ಮುಂಚಿತವಾಗಿಯೆ ಮಾಹಿತಿ ಸಿಕ್ಕಿತ್ತು. ಜಾಗೃತರಾದ ಪೊಲೀಸರು ದರೋಡೆಕೋರರನ್ನು ಸೆರೆಹಿಡಿಯುವಲ್ಲಿ ಕಡೆಗೂ ಯಶಸ್ವಿಯಾದರು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಹೇಮಾಮಾಲಿನಿ ಮನೆಯಲ್ಲಿ ಕಳುವು ಮಾಡಿದ್ದು ತಾವೆ ಎಂಬುದನ್ನು ಬಾಯ್ಬಿಟ್ಟಿದ್ದಾಗಿ ಮಾರಿಯಾ ಅವರು ವಿವರ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada