»   » ಅಮಿತಾಭ್ ಕ್ಷಮೆಯಾಚನೆಯಿಂದ ಠಾಕ್ರೆ ತೃಪ್ತಿ

ಅಮಿತಾಭ್ ಕ್ಷಮೆಯಾಚನೆಯಿಂದ ಠಾಕ್ರೆ ತೃಪ್ತಿ

Posted By:
Subscribe to Filmibeat Kannada

ಮುಂಬೈ, ಸೆ. 11 : ಜಯಾ ಬಚ್ಚನ್ ನೀಡಿರುವ ಹೇಳಿಕೆಗೆ ಕ್ಷಮೆ ಇರಲಿ, ಸುಮಾರು 40 ವರ್ಷ ಮರಾಠಿ ನೆಲೆದಲ್ಲಿ ಬದುಕಿರುವೆ, ಈ ನೆಲಕ್ಕೆ ದ್ರೋಹ ಬಗೆಯುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ಎಂದು ಅಮಿತಾಭ್ ಬಚ್ಚನ್ ಬಹಿರಂಗವಾಗಿ ಕ್ಷಮೆಯಾಚಿರುವ ಹಿನ್ನೆಲೆಯಲ್ಲಿ ಬಚ್ಚನ್ ಕುಟುಂಬದ ಚಿತ್ರಗಳ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಘೋಷಿಸಿದ್ದಾರೆ.

ಇದು ಮರಾಠಿಗರ ಗೆಲುವು ಎಂದು ಠಾಕ್ರೆ ವರ್ಷ ವ್ಯಕ್ತಪಡಿಸಿದ್ದಾರೆ. ಜಯಾ ಬಚ್ಚನ್ ಕ್ಷಮಾಪಣೆಯನ್ನು ತಿರಸ್ಕರಿಸಿದ್ದ ಎಂಎನ್ಎಸ್ ಬುಧವಾರ ಅಮಿತಾಭ್ ಬಚ್ಚನ್ ನಟಿಸಿರುವ 'ದ ಲಾಸ್ಟ್ ಲೀಯರ್' ಚಿತ್ರದ ಪ್ರಿಮಿಯರ್ ಶೋಗೆ ಅಡ್ಡಿ ಉಂಟು ಮಾಡಿ ಪ್ರದರ್ಶನ ಸ್ಥಗಿತಗೊಳಿಸಿದ್ದರು. ಅಲ್ಲದೆ ನಗರದಲ್ಲಿರುವ ಅಮಿತಾಭ್ ಕುಟುಂಬದ ಸದಸ್ಯರಿರುವ ಸಾರ್ವಜನಿಕ ಜಾಹೀರಾತು ಫಲಕಗಳನ್ನು ಎಂಎನ್ಎಸ್ ಕಾರ್ಯಕರ್ತರು ತೆಗೆದುಹಾಕಿದ್ದರು.
   
ಮರಾಠಿ ಭಾಷೆಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹರಾಷ್ಟ್ರ ನವನಿರ್ಮಾಣ ವೇದಿಕೆ ಮತ್ತು ಬಚ್ಚನ್ ಕುಟುಂಬದ ನಡುವಿನ ಸಮರ ಕೊನೆಗೊಂತಾಗಿದೆ. ತಿಳಿದೋ ತಿಳಿಯದೆಯೋ ನಾನಾಡಿರುವ ಮಾತಿನಿಂದ ಮರಾಠಿ ಜನತೆಗೆ ನೋವಾಗಿದ್ದರೆ ದಯವಿಟ್ಟು  ಕ್ಷಮಿಸಿ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಮಂಗಳವಾರ ಮರಾಠಿ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಮರಾಠಿ ಪತ್ರಿಕೆಗಳ ಮೂಲಕ ಕ್ಷಮೆಯಾಚನೆ ಮಾಡಬೇಕು ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮನವಿಗೆ ಸೂಕ್ತವಾಗಿ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಅವರ ಬಚ್ಚನ್ ಕುಟುಂಬ ಚಿತ್ರಗಳನ್ನು ನಿಷೇಧಕ್ಕೆ ಎಂಎನ್ಎಸ್ ಕಾರ್ಯಕರ್ತರು ಮುಂದಾಗಿದ್ದರು. ಇದೀಗ ಅಮಿತಾಭ್ ಕ್ಷಮೆಯಾಚನೆ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.

(ದಟ್ಸ್ ಕನ್ನಡ ವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X