»   » ಬಿಕಿನಿಯಲ್ಲೇ ಬರ್ತ್ ಡೆ ಆಚರಿಸಿಕೊಂಡ ಸೋಫಿಯಾ ಹಯಾತ್!

ಬಿಕಿನಿಯಲ್ಲೇ ಬರ್ತ್ ಡೆ ಆಚರಿಸಿಕೊಂಡ ಸೋಫಿಯಾ ಹಯಾತ್!

Posted By:
Subscribe to Filmibeat Kannada
sofia-hayat-in-hot-bikini-on-her-birthday
ಪ್ರಚಾರನಿಮಿತ್ತಂ ಬಹುಕೃತ ವೇಶಂ ಅನ್ನುವುದು ಹಳೆಯ ಮಾತಾಯಿತು. ಹೊಸದೇನಪಾ ಅಂದರೆ ಒಂದು ನೂಲು ವೇಶವೂ ತೊಡದೆ ಅಥವಾ ಜಸ್ಟ್ ಬಿಕಿನಿ ವೇಶ ತೊಟ್ಟು ಪ್ರಚಾರ ಗಿಟ್ಟಿಸುವುದು ತಾಜಾ ಬೆಳವಣಿಗೆ. ಏನಾಯಿತೆಂದರೆ ಸೋಫಿಯಾ ಹಯಾತ್ ಎಂಬ ವಿವಾದಿತ ಮಾಡೆಲ್ ಮೊನ್ನೆ ತನ್ನ 27ನೇ ಹುಟ್ಟು ಹಬ್ಬವನ್ನು ತುಂಬಾ ವಿಶಿಷ್ಟವಾಗಿ ಆದರೆ ಅಸಹ್ಯಕರವಾಗಿ ಆಚರಿಸಿಕೊಂಡಿದ್ದಾಳೆ.

ಬ್ರಿಟನ್-ಏಷ್ಯಾದ ನಟಿ, ರೂಪದರ್ಶಿ ಸೋಫಿಯಾ ಹಯಾತ್ ಕಳೆದ ವಾರ (ಡಿ. 6) ಮುಂಬೈನಲ್ಲಿ ಟು ಪೀಸ್ ತುಂಡು ಉಡುಗೆ ತೊಟ್ಟು ಕೇಕ್ ಕತ್ತರಿಸಿದ್ದಾಳೆ. ಸಾಲದು ಅಂತ ವಿವಿಧ ವಿಕೃತ ಭಂಗಿಗಳಲ್ಲೂ ಕಾಣಿಸಿಕೊಂಡಿದ್ದಾಳೆ. ಹಯಾತ್ ಕೇಕ್ ಕಟ್ ಮಾಡುವಾಗಿವ ಭಂಗಿಯನ್ನಂತೂ ವೀಕ್ಷಕರ ವಿಮರ್ಶೆಗೆ ಬಿಡುವುದು ಒಳಿತು. (ಒಮ್ಮೆ ಚಿತ್ರ ನೋಡಿ ಪಾವನರಾಗಿ).

ಯಾಕಮ್ಮಾ ಬಿಚ್ಚೋಲೆ ಗೌರಮ್ಮ ಜನ್ಮ ದಿನದಂದು ಹೀಗೆಲ್ಲ ಅವತಾರ ಎತ್ತಿದೆ ಅಂತ ಕೇಳಿದ್ದಕ್ಕೆ 'ನಾನು ಸೋಫೀಯಾಳ ಬಿಕಿನಿ ಬರ್ತ್ ಡೆ' ಆಚರಿಸುವ ಉಮೇದಿಗೆ ಬಿದ್ದಿದ್ದೆ ಎಂದಿದ್ದಾಳೆ. ಪುಣ್ಯಾತ್ತಗಿತ್ತಿ, ಮುಂದಿನ ಜನ್ಮ ದಿನವನ್ನು ಬರ್ತ್ ಡೆ ಡ್ರೆಸ್ ಧರಿಸಿ ಆಚರಿಸಿಕೊಳ್ಳದಿದ್ದರೆ ಸಾಕು.

ಅಂತರ್ಜಾಲದಲ್ಲಿ ನೆಟ್ಟಿಗರು ಸೋಫಿಯಾಳ ಈ ಬಿಕಿನಿ ಆಟ ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವಳ ತುಂಡುಡುಗೆಯನ್ನೂ ಕಳಚಿ, ಇವಳ ಮಾನ ಮರ್ಯಾದೆಯನ್ನು ಹರಾಜಿಗೆ ಹಾಕಿದ್ದಾರೆ. ಅಂದಹಾಗೆ ನಿಮ್ಮ ಜ್ಞಾಪಕಕ್ಕೆ ತರಲು ಬಯಸುವುದಾದರೆ ಇಂತಿಪ್ಪ ಸೋಫಿಯಾ ಕಳೆದ ವರ್ಲ್ಡ್ ಕಪ್ ಕ್ರಿಕೆಟ್ ನಲ್ಲಿ ಮೈಮೇಲೆ ಭಾರತದ ರಾಷ್ಟ್ರದ ಧ್ವಜದ ಬಣ್ಣ ಬಳಿದುಕೊಂಡು ಚಿತ್ರವಿಚಿತ್ರವಾಗಿ ಕಾಣಿಸಿಕೊಂಡಿದ್ದಳು.

English summary
British-Asian actor Sofia Hayat celebrated her 27th birthday on Tuesday in a two-piece bikini in Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada