For Quick Alerts
  ALLOW NOTIFICATIONS  
  For Daily Alerts

  ರಜನಿ ಅಳಿಯ ಧನುಷ್ ಮೇಲೆ ರಾಂಗ್ ಆದ ರಾಖಿ

  By Rajendra
  |

  ಬಾಲಿವುಡ್‌ನ ಅಸಲಿ ಐಟಂ ಗರ್ಲ್ ರಾಖಿ ಸಾವಂತ್ ಮುನಿಸಿಕೊಂಡಿದ್ದಾರೆ. ಅದೂ ಆಕೆ ಮುನಿಸಿಕೊಂಡಿರುವುದು ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಮೇಲೆ. ಇದಕ್ಕೆ ಕಾರಣವಾಗಿರುವುದು ಜನಪ್ರಿಯ ಹಿಟ್ ಸಾಂಗ್ "ವೈ ದಿಸ್ ಕೊಲವೆರಿ ಡಿ".

  ಈ ಹಾಡಿಗೆ ಕಾರ್ಯಕ್ರಮವೊಂದರಲ್ಲಿ ರಾಖಿ ಜೊತೆ ಹೆಜ್ಜೆ ಹಾಕುವುದಾಗಿ ಧನುಷ್ ಮಾತುಕೊಟ್ಟಿದ್ದನಂತೆ. ಆದರೆ ಕಾರಣಾಂತರಗಳಿಂದ ಕೊನೆ ಕ್ಷಣದಲ್ಲಿ ಧನುಷ್ ಪ್ರೋಗ್ರಾಂ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಆದರೆ ರಾಖಿ ಸಿಕ್ಕಾಪಟ್ಟೆ ಮೇಕಪ್ ಮಾಡಿಕೊಂಡು ಧನುಷ್ ಜೊತೆ ಡ್ಯಾನ್ಸ್ ಮಾಡಲು ಸಿದ್ಧವಾಗಿದ್ದರಂತೆ.

  ಧನುಷ್ ಬರುತ್ತಿಲ್ಲ ಎಂದು ಗೊತ್ತಾಗಿದ್ದೇ ತಡ ಆಕೆ ಕೆರಳಿದ ಸರ್ಪದಂತಾಗಿದ್ದಾರೆ. ಈ ಮೂಲಕ ಧನುಷ್ ನನಗೆ ಅಪಮಾನ ಮಾಡಿದ್ದಾರೆ ಎಂದು ರಾಖಿ ದೂರಿದ್ದಾರೆ. ಹೇಳಿಕೇಳಿ ರಾಖಿ ಡ್ರಾಮಾ ಕ್ವೀನ್, ವಿವಾದಿತ ನಟಿ ಬೇರೆ ಆಕೆಯೊಂದಿಗೆ ಕುಣಿಯುವುದು ಅಷ್ಟು ಸರಿಯಲ್ಲ ಎಂದು ಧನುಷ್ ಹಿತೈಷಿಗಳು ಕಿವಿಕಚ್ಚಿದ್ದಾಗಿ ಸುದ್ದಿಯಿದೆ. ಹಾಗಾಗಿ ಧನುಷ್ ಕಾರ್ಯಕ್ರಮಕ್ಕೆ ಚಕ್ಕರ್ ಹಾಕಿದರಂತೆ.

  ನನ್ನೊಂದಿಗೆ ಸಲ್ಮಾನ್ ಖಾನ್, ಶಾರುಖ್ ಖಾನ್, ಸಂಜಯ್ ದತ್ ಸೇರಿದಂತೆ ಕ್ರಿಕೆಟಿಗ ಕಪಿಲ್ ದೇವ್ ಕೂಡ ಹೆಜ್ಜೆ ಹಾಕಿದ್ದಾರೆ. ಆದರೆ ಅವರ್ಯಾರು ಧನುಷ್ ತರಹ ಫೀಲ್ ಆಗಲಿಲ್ಲ ಎಂದು ರಾಖಿ ಸ್ವಲ್ಪ ಬೇಸದರಲ್ಲೇ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

  English summary
  Rakhi Sawant, who is the original item girl of Bollywood, is very upset with the Kolaveri guy Dhanush. Reportedly, Dhanush was scheduled to perform Kolaveri on stage with Rakhi in a recent event, but he cancelled his appearance at the last moment. Rakhi, who was all prepared for the performance felt humiliated and insulted due to this.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X