»   » ರಿಚರ್ಡ್ ಗೇರ್ ಬಂಧನಕ್ಕೆ ಸುಪ್ರೀಂ ತಡೆಯಾಜ್ಞೆ

ರಿಚರ್ಡ್ ಗೇರ್ ಬಂಧನಕ್ಕೆ ಸುಪ್ರೀಂ ತಡೆಯಾಜ್ಞೆ

Subscribe to Filmibeat Kannada

ನವದೆಹಲಿ, ಮಾ.14: ಶಿಲ್ಪಾ ಶೆಟ್ಟಿಯನ್ನು ಅಪ್ಪಿ ಮುದ್ದಾಡಿದ ಘಟನೆಗೆ ಸಂಬಂಧಿಸಿದಂತೆ ರಿಚರ್ಡ್ ಗೇರ್ ಅವರನ್ನು ಬಂಧಿಸಬೇಕು ಎಂದು ಕೆಳ ನ್ಯಾಯಾಲಯಗಳು ವಿಧಿಸಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಬಂಧನದ ಆಜ್ಞೆ ಇರುವ ಕಾರಣ ವಿಚಾರಣೆಗಾಗಿ ನಟನೊಬ್ಬ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್ ಅವರು ವಾದಿಸಿದ್ದರು. ಇದನ್ನು ಆಲಿಸಿದ, ಕೆ.ಜಿ.ಬಾಲಕೃಷ್ಣನ್, ಜಸ್ಟೀಸ್ ಅಲ್‌ತಮಸ್ ಕಬೀರ್ ಮತ್ತು ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ಪೀಠವು ರಿಚರ್ಡ್ ಗೇರ್ ಬಂಧನದ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಇದೇ ರೀತಿ, ಶಿಲ್ಪಾಶೆಟ್ಟಿ ಅವರನ್ನು ಬಂಧಿಸಬೇಕೆಂಬ ಆಜ್ಞೆಗೆ ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ತಡೆಆಜ್ಞೆ ನೀಡಿತ್ತು.

ದೆಹಲಿಯಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮದ ವೇದಿಕೆ ಮೇಲೆ ಹಾಲಿವುಡ್‌ ನಟ ರಿಚರ್ಡ್‌ ಗೇರ್‌, ಶಿಲ್ಪಾ ಶೆಟ್ಟಿಯನ್ನು ಅಪ್ಪಿ ಮುದ್ದಾಡಿದ ಘಟನೆ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಜೈಪುರದ ನ್ಯಾಯಾಲಯ ಗೇರ್ ಅವರನ್ನು ಬಂಧಿಸುವಂತೆ ಆದೇಶಿಸಿತ್ತು. ಅಂತೆಯೇ ಉತ್ತರ ಪ್ರದೇಶದ ಘಾಜಿಯಾಬಾದ್‌ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ರಿಚರ್ಡ್ ಗೇರ್ ತನ್ನ ಮೇಲಿನ ಬಂಧನದ ಆಜ್ಞೆಯನ್ನು ತೆರವುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ವಿನಂತಿಸಿಕೊಂಡಿದ್ದರು.

(ಏಜೆನ್ಸೀಸ್)

ಪೂರಕ ಓದಿಗೆ:
ರಿಚರ್ಡ್‌ ಗೇರ್‌ ನನ್ಗೆ ಕಿಸ್‌ ಕೊಟ್ಟದ್ದು ತಪ್ಪಾ? -ಶಿಲ್ಪಾ ಶೆಟ್ಟಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada