For Quick Alerts
  ALLOW NOTIFICATIONS  
  For Daily Alerts

  ನಟ ಸನ್ನಿ ಡಿಯೋಲ್ ಧ್ವನಿಗೆ ಕಾಪಿರೈಟ್ ಮುದ್ರೆ ಬೀಳಲಿದೆ

  By Rajendra
  |

  ಪ್ರತಿಯೊಬ್ಬ ಕಲಾವಿದನಲ್ಲೂ ತನ್ನದೇ ಆದಂತಹ ವಿಶಿಷ್ಟ ಗುಣಗಳಿರುತ್ತವೆ. ಈ ಗುಣಗಳೇ ಅವರನ್ನು ಉಳಿದ ಕಲಾವಿದರಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುತ್ತವೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಬಗ್ಗೆ ಹೇಳುವುದಾದರೆ ತಮ್ಮ ವಿಶಿಷ್ಟ ಕಂಠದಿಂದಲೇ ಅವರು ಹೆಸರಾದವರು. ಈಗ ಅವರು ತಮ್ಮ ವಿಭಿನ್ನ ಕಂಠವನ್ನು ಕಾಪಿರೈಟ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

  ಈ ಹಿಂದೆ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ತಮ್ಮ ಧ್ವನಿಯನ್ನು ಕಾಪಿರೈಟ್ ಮಾಡಿಸಿಕೊಂಡಿದ್ದರು. ಈಗ ಇದೇ ಹಾದಿಯಲ್ಲಿ ಸನ್ನಿ ಡಿಯೋಲ್ ಹೆಜ್ಜೆ ಹಾಕಲು ಹೊರಟಿದ್ದಾರೆ. ಸನ್ನಿ ಅಭಿನಯದ ಲೇಟೆಸ್ಟ್ ಚಿತ್ರ 'ಯಮಲಾ ಪಗಲಾ ದಿವಾನಾ' ಬಿಡುಗಡೆ ಸಿದ್ಧವಾಗಿದೆ. ಈ ಚಿತ್ರದಲ್ಲಿನ ತಮ್ಮ ವಿಶಿಷ್ಟ ಧ್ವನಿಯನ್ನು ಸನ್ನಿ ಕಾಪಿರೈಟ್ ಮಾಡಿಸಲಿದ್ದಾರೆ.

  ಪೂರ್ವಾನುಮತಿ ಇಲ್ಲದೆ ಸನ್ನಿ ಡಿಯೋಲ್ ಧ್ವನಿಯನ್ನು ಎಲ್ಲೂ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬಳಸಿದರೆ ಕಾಪಿರೈಟ್ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಸದ್ಯಕ್ಕೆ ತಮ್ಮ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಸನ್ನಿ, ಚಿತ್ರ ಬಿಡುಗಡೆಯಾಗುವುದರಲ್ಲಿ ತಮ್ಮ ಧ್ವನಿಯನ್ನು ಕಾಪಿರೈಟ್ ಮಾಡಿಸಲಿದ್ದಾರಂತೆ.

  ಅಯ್ಯೋ ಬಿಡ್ರಿ ನೀವೂ ಸರಿಯಾಗಿ ಹೇಳ್ತೀರಾ, ಸನ್ನಿ ಡಿಯೋಲ್‍ಗೆ ಸರಿಯಾಗಿ ಡೈಲಾಗ್ ಹೊಡೆಯೋಕೆ ಬರಲ್ಲ. ಇನ್ನು ಕಾಪಿರೈಟ್ ಮಾಡಿಸಿಕೊಂಡು ಏನು ಪ್ರಯೋಜನ. ಅವರ ಧ್ವನಿಯೋ ಅಬ್ಬಬ್ಬಾ ಕೇಳಬೇಕು ಅಂದ್ರನೇ ಭಯಾ ಆಗುತ್ತದೆ, ಏನೋ ಒಂಥರಾ ಕಿವಿಗೆ ಕಾದಸೀಸ ಸುರಿದಂತಾಗುತ್ತದೆ ಎಂದು ಸಿನಿಕರು ಮೂಗು ಮುರಿದಿದ್ದಾರೆ.

  English summary
  Bollywood actor Sunny Deol wants to get his vocals copyrighted. It is said that he would be going ahead and acquire the copyright of his voice once his Yamla Pagla Deewana is released.
  Tuesday, December 14, 2010, 14:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X