»   »  ತಾರೆಗೆ ಕೈಗೆಟುಕದ ಆಸ್ಕರ್ ನಕ್ಷತ್ರ

ತಾರೆಗೆ ಕೈಗೆಟುಕದ ಆಸ್ಕರ್ ನಕ್ಷತ್ರ

Posted By:
Subscribe to Filmibeat Kannada
Taare Zameen Par out of Oscar race
ನವದೆಹಲಿ, ಜ. 14 : ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಬೇಕೆಂಬ ಅಮೀರ್ ಖಾನ್ ಕನಸು ಮತ್ತೆ ಭಗ್ನವಾಗಿದೆ. ಅಮೀರ್ ನಿರ್ದೇಶನದ 'ತಾರೆ ಜಮೀನ್ ಪರ್' ಚಿತ್ರ ಆಸ್ಕರ್ ಸ್ಪರ್ಧೆಯಿಂದ ಹೊರಬಿದ್ದಿರುವುದು ಭಾರತೀಯರಿಗೆ ಭಾರೀ ನಿರಾಶೆ ಮೂಡಿಸಿದೆ. ವಿದೇಶಿ ಭಾಷೆಯ ಚಿತ್ರಗಳ ವಿಭಾಗದಲ್ಲಿ ಒಂಬತ್ತರಲ್ಲೊಂದಾಗಬಹುದೆಂದು ನಿರೀಕ್ಷಿಸಲಾಗಿತ್ತು.

ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಮತ್ತು ಸೈನ್ಸ್ ಆಸ್ಕರ್ ಗೆ ನಾಮನಿರ್ದೇಶನವಾಗಿರುವ 9 ವಿದೇಶಿ ಭಾಷಾ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿರುವ ಇಸ್ರೇಲಿ ಚಿತ್ರ ವಾಲ್ಟಜ್ ವಿತ್ ಬಶೀರ್ ಚಿತ್ರ ಸ್ಥಾನ ಪಡೆದಿದೆ. ಜರ್ಮನಿಯ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಕ್ಷಕಿರಣ ಬೀರಿರುವ ಬಾಡರ್ ಮೀನ್ಹಾಫ್ ಕಾಂಪ್ಲೆಕ್ಸ್ ಕೂಡ ಸ್ಥಾನ ಪಡೆಯಲು ಯಶಸ್ವಿಯಾಗಿದೆ.

ಆ ಪಟ್ಟಿಯಲ್ಲಿರುವ ಇತರ ಚಿತ್ರಗಳು : ರೆವಾಂಚೆ (ಆಸ್ಟ್ರಿಯಾ), ದಿ ನೆಸೆಸಿಟೀಸ್ ಆಫ್ ಲೈಫ್ (ಕೆನಡಾ), ದಿ ಕ್ಲಾಸ್ (ಫ್ರಾನ್ಸ್), ಡಿಪಾರ್ಚರ್ಸ್ (ಜಪಾನ್), ಟಿಯರ್ ದಿಸ್ ಹಾರ್ಟ್ ಔಟ್ (ಮೆಕ್ಸಿಕೊ), ಎವರಲಾಸ್ಟಿಂಗ್ ಮೊಮೆಂಟ್ಸ್ (ಸ್ವೀಡನ್) ಮತ್ತು 3 ಮಂಕೀಸ್ (ಟರ್ಕಿ).

ಅಮೀರ್ ನಟನೆಯ ಮತ್ತು ಅಶುತೋಷ್ ಗವಾರಿಕರ್ ನಿರ್ದೇಶನದ ಲಗಾನ್ ಚಿತ್ರ 2002ರಲ್ಲಿ ಆಸ್ಕರ್ ಪ್ರಶಸ್ತಿಯ ಹೊಸ್ತಿಲಲ್ಲಿ ಮುಗ್ಗರಿಸಿ ಬಿದ್ದಿತ್ತು. ಆಗ ನೋ ಮ್ಯಾನ್ಸ್ ಲ್ಯಾಂಡ್ ವಿದೇಶಿ ಚಿತ್ರ ಲಗಾನ್ ನಿಂದ ಪ್ರಶಸ್ತಿ ಕಿತ್ತುಕೊಂಡಿತ್ತು.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada