For Quick Alerts
  ALLOW NOTIFICATIONS  
  For Daily Alerts

  ಮಲ್ಲಿಕಾ: ಒಂದಲ್ಲ ಎರಡು ಐಟಂ ಸಾಂಗ್ ರಸಗವಳ

  By Srinath
  |

  ಮುಂಬಯಿ, ಫೆ. 15: ಪಡ್ಡೆಹುಡುಗರ ಐಟಂ ಗರ್ಲ್ ಮಲ್ಲಿಕಾ ಶೆರಾವತ್ ಇತ್ತೀಚೆಗೆ ನಾಗಕನ್ಯೆಯಾಗಿ ಮಲೆಯಾಳಿ ಕುಟ್ಟಿ ವೇಶದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಒಂದಷ್ಟು ಬೇಸರ ತಂದಿದ್ದಳು. ಆದರೆ ತನ್ನ ಗ್ಲಾಮರ್‌ಅನ್ನು ಮರು ಗಳಿಸುವ ಸಾಹಸದಲ್ಲಿ ಮತ್ತೆ ಐಟಂ ಸಾಂಗ್‌ನಲ್ಲಿ ಬಳುಕಲು ಮಲ್ಲಿಕಾ ಸಜ್ಜಾಗಿದ್ದಾಳೆ.

  ಕುತೂಹಲದ ಸಂಗತಿಯೆಂದರೆ ಅಭಿಮಾನಿಗಳನ್ನು ನಿರಾಶೆಪಡಿಸದಿರಲು ಪಣ ತೊಟ್ಟಿರುವ ಮಲ್ಲಿಕಾ, ಒಟ್ಟೊಟ್ಟಿಗೆ ಒಂದಲ್ಲ ಎರಡು ಐಟಂ ಸಾಂಗ್‌ಗಳ ರಸದೌತಣ ಬಡಿಸಲು ಹಾತೊರೆಯುತ್ತಿದ್ದಾಳೆ. ಅನೇಕ ವರ್ಷಗಳ ನಂತರ ಆನಂದ್ ಮಿಲಿಂದ್ ಈ ಐಟಂ ಸಾಂಗ್‌ಗಳಲ್ಲಿ ತಮ್ಮ ಕರಾಮತ್ತು ತೋರಲಿದ್ದಾರೆ.

  ಚಂದ್ರಕಾಂತ್ ಸಿಂಗ್‌ರ 'ಬಿನ್ ಬುಲಾಯೆ ಬಾರಾತಿ' ಸಿನಿಮಾಗಾಗಿ ಕುಣಿಯಲು ಮಲ್ಲಿಕಾ ಕಟಿಬದ್ಧವಾಗಿದ್ದಾಳೆ. ಇದಕ್ಕಾಗಿ 3 ಕೋಟಿ ರೂ. ಸಂಭಾವನೆಯನ್ನು ಪಡೆಯಲಿದ್ದಾಳೆ. ಈಗಾಗಲೇ ಗೋವಾದಲ್ಲಿ ಚಿತ್ರೀಕರಣ ಆರಂಭವಾಗಿದ್ದು, ತಾರಾಗಣದಲ್ಲಿ ಅಫ್ತಾಬ್ ಶಿವದಾಸಾನಿ, ನಿಶಾ ಕೊಠಾರಿ, ಓಂ ಪುರಿ ಇದ್ದಾರೆ. ಇದೊಂದು ಮಾಸ್ ಚಿತ್ರವಾಗಿದ್ದು, ಚಿತ್ರ ರಸಿಕರ ಮನಸೂರೆಗೊಳ್ಳುವುದರಲಿ ಅನುಮಾನವಿಲ್ಲ ಎಂದು ಸಹ ನಿರ್ಮಾಪಕ ಪ್ರಕಾಶ್ ಜಾಜು ಘೋಷಿಸಿದ್ದಾರೆ.

  English summary
  Mallika Sheravath is gearing up to dance to not one but two item songs in Chandrakant Singh's film Bin Bulaye Baarati. And guess what her fee will be. Rs 3 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X