»   » 'ಎಂಎನ್ ಐಕೆ'ಗೆ ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ

'ಎಂಎನ್ ಐಕೆ'ಗೆ ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ

Posted By:
Subscribe to Filmibeat Kannada

ಶಾರುಖ್ ಖಾನ್ ಅವರ ತಾಜಾ ಚಿತ್ರ 'ಮೈ ನೇಮ್ ಈಸ್ ಖಾನ್'(ಎಂಎನ್ ಐಕೆ) ಬಗ್ಗೆ ಅಮೆರಿಕಾ ಹಾಗೂ ಕೆನಡಾದ ಮಾಧ್ಯಮಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ಎಂಎನ್ ಐಕೆ ಚಿತ್ರ ಕೆನಡಾ ಹಾಗೂ ಅಮೆರಿಕಾದ 119 ಚಿತ್ರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

''ಉತ್ತಮ ಅಂಶಗಳನ್ನು ಒಳಗೊಂಡ ಸದಭಿರುಚಿಯ ಚಿತ್ರ ಇದಾಗಿದೆ'' ಎಂದು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ 'ಎಂಎನ್ ಐಕೆ' ಚಿತ್ರವನ್ನು ಕೊಂಡಾಡಿದೆ. 9/11 ದಾಳಿ ನಂತರ ಭಾರತೀಯ ಜೀವನ ಶೈಲಿ ಕುರಿತು ನಿರ್ಮಿಸಿದ ಹಿಂದಿ ಚಿತ್ರಗಳಲ್ಲಿ(ನ್ಯೂಯಾರ್ಕ್ ಹಾಗೂ ಕುರ್ ಬಾನ್) ಇದೂ ಒಂದಾಗಿದೆ ಎಂದು ಪತ್ರಿಕೆ ಬಣ್ಣಿಸಿದೆ.

ಎಂಎನ್ ಐಕೆ ಚಿತ್ರವು ಉತ್ತಮ, ಪ್ರಭಾವಿ ಹಾಗೂ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡಿದೆ. ಶಾರುಖ್ ಮತ್ತು ಕಾಜೋಲ್ ಅವರ ಅಭಿನಯ ಅಮೋಘ ಎಂದು ಲಾಸ್ ಏಂಜಲೀಸ್ ಪತ್ರಿಕೆ ಬಣ್ಣಿಸಿದೆ. ಕರಣ್ ಜೋಹಾರ್ ಅವರ ನಿರ್ದೇಶನದ ಬಗ್ಗೆಯೂ ಪತ್ರಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಚಿತ್ರ ಕೆನಡಾ ಮತ್ತು ಅಮೆರಿಕಾ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದ್ದು ಈಗಾಗಲೇ 1.86 ದಶಲಕ್ಷ ಯುಎಸ್ ಡಾಲರ್ ಗಳನ್ನು ಗಳಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada