For Quick Alerts
  ALLOW NOTIFICATIONS  
  For Daily Alerts

  ಅಸ್ಥಿಮಜ್ಜೆ ದಾನಕ್ಕೆ ಸಲ್ಮಾನ್ ಖಾನ್ ಶ್ರೀಕಾರ

  By Rajendra
  |

  ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಪ್ರಾಣಾಪಾಯದಿಂದ ಉಳಿಸಲು ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದಾಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಬೋನ್ ಮ್ಯಾರೋ ದಾನ ಮಾಡುವಂತೆ ಸಲ್ಲು ಕರೆ ಕೊಟ್ಟಿದ್ದಾರೆ.

  "ಬೋನ್ ಮ್ಯಾರೋ(ಅಸ್ಥಿಮಜ್ಜೆ) ದಾನ ಮಾಡುವುದು ತುಂಬಾ ಸರಳ. ಇದಕ್ಕೆ ನಯಾ ಪೈಸೆಯೂ ಖರ್ಚಾಗುವುದಿಲ್ಲ. ಪ್ರತಿಯೊಬ್ಬರು ಬೋನ್ ಮ್ಯಾರೋ ದಾನಕ್ಕೆ ಮುಂದಾಗಬಹುದು ಎನ್ನಿಸುತ್ತದೆ ನನಗೆ" ಎಂದು ಸಲ್ಲು ಅಸ್ಥಿಮಜ್ಜೆ ದಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

  ಬೋನ್ ಮ್ಯಾರೋ ದಾನ ಮಾಡುವ ಮೂಲಕ ರಕ್ತದ ಕ್ಯಾನ್ಸರ್ ಸೇರಿದಂತೆ ಹಲವು ವಿಧವಾದ ರಕ್ತದಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಉಳಿಸಬಹುದು. ಒಬ್ಬರು ಬೋನ್ ಮ್ಯಾರೋ ದಾನ ಮಾಡಲು ಮುಂದಾದರೆ ಅನೇಕ ಮಂದಿ ಅದೇ ದಾರಿಯಲ್ಲಿ ಹೆಜ್ಜೆಹಾಕುತ್ತಾರೆ ಎಂದಿದ್ದಾರೆ ಸಲ್ಲು.

  ನಾನೂ ಸಹ ಬೋನ್ ಮ್ಯಾರೋ ದಾನ ಮಾಡಲು ಮುಂದಾಗಿದ್ದೇನೆ. ಯಾರಿಗಾದರೂ ತುರ್ತು ಅಗತ್ಯವಿದ್ದು ನನ್ನ ಬೋನ್ ಮ್ಯಾರೋ ಅವರಿಗೆ ಹೊಂದಾಣಿಕೆಯಾಗುವಂತಿದ್ದರೆ ನಾನು ದಾನ ಮಾಡಲು ಸಿದ್ಧನಿದ್ದೇನೆ. ಈಗಾಗಲೆ ನನ್ನ ಹೆಸರನ್ನು ಮ್ಯಾರೋ ಡೋನರ್ಸ್ ರಿಜಿಸ್ಟ್ರಿ (ಇಂಡಿಯಾ) ಸಂಸ್ಥೆಯಲ್ಲಿ ನೋಂದಾಯಿಸಿಕೊಂಡಿರುವುದಾಗಿ ಸಲ್ಲು ತಿಳಿಸಿದ್ದಾರೆ.

  ಹೆಚ್ಚು ಹೆಚ್ಚು ಜನ ಬೋನ್ ಮ್ಯಾರೋ ದಾನ ಮಾಡಲು ಮುಂದಾದರೆ ಹೆಚ್ಚು ಹೆಚ್ಚು ಕ್ಯಾನ್ಸರ್ ರೋಗಿಗಳನ್ನು ಉಳಿಸಬಹುದು. ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಮುಂದೆ ಬಂದು ಬೋನ್ ಮ್ಯಾರೋ ದಾನ ಮಾಡಬೇಕು ಎಂದು ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

  English summary
  Bollywood star Salman Khan urges people to donate their bone marrow as it could save someone’s life suffering from cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X