»   » ಚಾರಿತ್ರಿಕ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ 'ವೀರ್'

ಚಾರಿತ್ರಿಕ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ 'ವೀರ್'

Subscribe to Filmibeat Kannada

ಸಲ್ಮಾನ್ ಖಾನ್ ನಾಯಕ ನಟನಾಗಿರುವ ಬಹು ನಿರೀಕ್ಷಿತ ಚಿತ್ರ 'ವೀರ್' ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಈ ಚಿತ್ರದ ವಿಶೇಷವೆಂದರೆ, ಸ್ವತಃ ಸಲ್ಲು ಈ ಚಿತ್ರಕ್ಕೆ ಕತೆ ಬರೆದಿರುವುದು. ಏರೋಸ್ ಇಂಟರ್ ನ್ಯಾಷನಲ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ.

'ವೀರ್' ಚಿತ್ರದ ನಿರ್ದೇಶಕಅನಿಲ್ ಶರ್ಮ. ಈ ಚಿತ್ರದ ಮೂಲಕ ಜರೈನ್ ಖಾನ್ ಬಾಲಿವುಡ್ ಚಿತ್ರಜಗತ್ತಿಗೆ ಹೊಸದಾಗಿ ಪರಿಚಯವಾಗುತ್ತಿದ್ದಾರೆ. ಜನವರಿ 22 ರಂದು ದೇಶದಾದ್ಯಂತ 'ವೀರ್' ಚಿತ್ರ ತೆರೆಕಾಣುತ್ತಿದೆ. ಗ್ರಾಫಿಕ್ಸ್, ವಿಜುವಲ್ ಎಫೆಕ್ಟ್ಸ್ ಗಳಿಲ್ಲದೆ ವಾಸ್ತವತೆಗೆ ಹೆಚ್ಚು ಒತ್ತು ಕೊಟ್ಟು ಈ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿರುವುದು ಚಿತ್ರದ ವಿಶೇಷಗಳಲ್ಲಿ ಒಂದು.

ಬಿಳಿಯರ ಆಳ್ವಿಕೆಯ ಹಿನ್ನೆಲೆಯಲ್ಲಿ ಸಾಗುವ ಚಾರಿತ್ರಿಕ ಕತೆಯಿದು. ತನ್ನ ಪ್ರೇಮಕ್ಕಾಗಿ ಬ್ರಿಟೇಷರೊಂದಿಗೆ ಹೋರಾಡುವ ಯೋಧನಾಗಿ ಸಲ್ಮಾನ್ ಈ ಚಿತ್ರದಲ್ಲಿ ಕಾಣಿಸುತ್ತಾರೆ. ಈ ಚಿತ್ರದ ಮೂಲಕ ಸಲ್ಲು ಐತಿಹಾಸಿಕ ಕತೆಯೊಂದನ್ನು ಸ್ಪರ್ಶಿಸಿದ್ದಾರೆ. ಹೊಸತನ್ನು ನಿರೀಕ್ಷಿಸುವ ಪ್ರೇಕ್ಷಕರಿಗೆ ಸಲ್ಲು ಚಿತ್ರ ಮುಂದೆ ನಿಲ್ಲಲಿದೆ. ವೀರ್ ಚಿತ್ರದ ಟ್ರೈಲರ್

ಕಂಕಣ ಸೂರ್ಯಗ್ರಹಣ, ವಜ್ರದುಂಗುರವನ್ನು ಕಣ್ತುಂಬ ನೋಡಿ, ಆನಂದಿಸಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada