ಗಂಡ ಹೆಂಡತಿಯಾಗಿ ಸಂಜಯ್ ದತ್ ಐಶ್ವರ್ಯ ರೈ

By Rajendra

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬಾಲಿವುಡ್ ಬೆಡಗಿ ಐಶ್ವರ್ಯ ರೈ ಹಾಗೂ ಸಂಜಯ್ ದತ್ ಗಂಡ ಹೆಂಡತಿಯಾಗಲಿದ್ದಾರೆ, ತೆರೆಯ ಮೇಲೆ. ಹಳೆ ಹಿಂದಿ ಚಿತ್ರ 'ಸತ್ತೆ ಪೆ ಸತ್ತಾ'ವನ್ನು ದತ್ ಪ್ರೊಡಕ್ಷನ್ಸ್ ಪುನರ್ ನಿರ್ಮಿಸುತ್ತಿದೆ. ಈ ರೀಮೇಕ್ ಚಿತ್ರದಲ್ಲಿ ಸಂಜು ಮತ್ತು ಐಶು ಗಂಡ ಹೆಂಡತಿಯಾಗಿ ಕಾಣಿಸಲಿದ್ದಾರೆ.

"ಸಂಜು ಪತ್ನಿಯಾಗಿ ವಿದ್ಯಾ ಬಾಲನ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅದು ಸುಳ್ಳು. ಈ ಪಾತ್ರಕ್ಕಾಗಿ ಇದುವರೆಗೂ ನಾವು ಯಾರನ್ನು ಸಂಪರ್ಕಿಸಿಲ್ಲ. ಐಶ್ವರ್ಯ ರೈ ಅವರನ್ನು 'ಸತ್ತೆ ಪೆ ಸತ್ತಾ' ಚಿತ್ರಕ್ಕೆ ಕರೆತರಲು ಮಾತುಕತೆ ನಡೆಯುತ್ತಿದೆ. ಈ ಪಾತ್ರ ಐಶ್ವರ್ಯ ರೈ ಅವರಿಗೆ ಸಂಪೂರ್ಣ ಒಪ್ಪುತ್ತದೆ ಎಂಬ ಕಾರಣಕ್ಕೆ ಅವರನ್ನು ಕರೆತರುತ್ತಿದ್ದೇವೆ ಎನ್ನುತ್ತದೆ ಚಿತ್ರತಂಡ.

ಈ ಹಿಂದೆ ಐಶು ಮತ್ತು ಸಂಜು ಡೇವಿಡ್ ಧವನ್ ಅವರ 'ಹಮ್ ಕಿಸೀಸೆ ಕಮ್ ನಹಿ' ಹಾಗೂ ಲೀಲಾ ಬಜಾಜ್ ಅವರ 'ಶಬ್ದ್' ಚಿತ್ರಗಳಲ್ಲಿ ಅಭಿನಯಿಸಿದ್ದರು. ಇವರಿಬ್ಬರ ಜೋಡಿ ಬಾಲಿವುಡ್‌ನಲ್ಲಿ ಗಮನಸೆಳೆದಿತ್ತು. ಆರು ಮಂದಿ ಮುಗ್ಧ ಅಣ್ಣತಮ್ಮಂದಿರ ಕಥಾ ಹಂದರವನ್ನು 'ಸತ್ತೆ ಪೆ ಸತ್ತಾ' ಚಿತ್ರ ಒಳಗೊಂಡಿದೆ. ಹಳೆ ಚಿತ್ರದಲ್ಲಿ ಹಿರಿಯಣ್ಣನಾಗಿ ಅಮಿತಾಬ್ ಹಾಗೂ ಕನಸಿನ ಕನ್ಯೆ ಹೇಮಾ ಮಾಲಿನಿ ಪ್ರೇಕ್ಷಕರಿಗೆ ರಸದೌತಣ ನೀಡಿದ್ದರು.

ಸದ್ಯಕ್ಕೆ ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್ ಜೊತೆ ನ್ಯೂಜಿಲ್ಯಾಂಡ್‌ಗೆ ಹಾರಿದ್ದಾರೆ. 'ಸತ್ತೆ ಪೆ ಸತ್ತಾ' ಚಿತ್ರದ ನಿರ್ದೇಶಕ ಸೋಹಂ ಶಾ ಚಿತ್ರಕತೆಯೊಂದಿಗೆ ನ್ಯೂಜಿಲ್ಯಾಂಡ್‌ಗೆ ಹಾರಿದ್ದಾರೆ. ಕತೆ ಹಿಡಿಸಿದರೆ ಐಶು ಕಾಗದಪತ್ರಗಳಿಗೆ ಸಹಿಹಾಕಲಿದ್ದಾರೆ. ಇಲ್ಲದಿದ್ದರೆ ನಿರ್ದೇಶಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಲಿದ್ದಾರೆ.

More from Filmibeat

English summary
If all goes well, Aishwarya Rai Bachchan may play wife of actor Sanjay Dutt's wife, in the Satte Pe Satta remake. Dutt, who also produces the film, is extremely keen that we sign Aishwarya to play the female lead opposite him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X