»   » ಬಿಕಿನಿ ಕೈಬಿಡುವಂತೆ ಕತ್ರಿನಾ ಮೇಲೆ ಸಲ್ಲು ಫತ್ವಾ

ಬಿಕಿನಿ ಕೈಬಿಡುವಂತೆ ಕತ್ರಿನಾ ಮೇಲೆ ಸಲ್ಲು ಫತ್ವಾ

Posted By:
Subscribe to Filmibeat Kannada

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹುಚ್ಚಾಟಗಳು ದಿನೇ ದಿನೇ ಮಿತಿಮೀರುತ್ತಿರುವುದಕ್ಕೆ ಇಲ್ಲಿದೆ ನಿದರ್ಶನ. ಈತನ ಹುಚ್ಚಾಟಗಳು ಕತ್ರಿನಾ ಕೈಫ್ ವೃತ್ತಿಜೀವನಕ್ಕೂ ತೊಡಕಾಗಿ ಪರಿಣಮಿಸಿವೆ.ಇತ್ತೀಚೆಗೆ ರಾಜಕಾರಣಿ ಪ್ರಫುಲ್ ಪಟೇಲ್ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ಕತ್ರಿನಾರನ್ನು ಕುಣಿಯುವಂತೆ ಸಲ್ಲು ಒತ್ತಾಯಿಸಿದ್ದ.ಆಕೆಗೆ ಮೈ ಹುಷಾರಿಲ್ಲದಿದ್ದರೂ ಕುಣಿಸಿದ ಕಾರಣ ಆಕೆ ಆಸ್ಪತ್ರೆ ಪಾಲಾಗಿದ್ದರು. ಇದೀಗ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಕತ್ರಿನಾಗೆ ಸೂಚಿಸಿದ್ದಾರೆ.

ಇದಿಷ್ಟೇ ಅಲ್ಲದೆ ಹೃತಿಕ್ ರೋಶನ್ ಜತೆ 'ಕ್ರಿಷ್ 2' ಚಿತ್ರದಲ್ಲಿ ಕತ್ರಿನಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಿಕಿನಿ ಸನ್ನಿವೇಶ ಬರುತ್ತದೆ. ಬಿಕಿನಿ ತೊಡದಂತೆ ಕತ್ರಿನಾ ಮೇಲೆ ಸಲ್ಲು ಫತ್ವಾ ಹೊರಡಿಸಿದ್ದಾನೆ. ವಿಧಿಯಿಲ್ಲದೆ ರಾಕೇಶ್ ರೋಷನ್ ತಮ್ಮ ಚಿತ್ರ 'ಕ್ರಿಷ್ 2'ಗೆ ಮತ್ತೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರೆ. ಒಂದು ವೇಳೆ ಕತ್ರಿನಾ ಬಿಕಿನಿ ದೃಶ್ಯವನ್ನು ಕೈಬಿಟ್ಟರೆ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ರಾಕೇಶ್ ಚಿಂತಿಸುತ್ತಿದ್ದಾರೆ.

ಗೆಳೆತನ ಎಂಬ ಅಸ್ತ್ರ ಬಳಸಿ ತನ್ನ ಮೇಲೆ ಇಲ್ಲಸಲ್ಲದ ನಿಷೇಧಗಳನ್ನು ಹೇರುತ್ತಿರುವ ಸಲ್ಲು ನಡವಳಿಕೆ ಬಗ್ಗೆ ಕತ್ರಿನಾ ತೀವ್ರ ಬೇಸರಗೊಂಡಿದ್ದಾರೆ. ಸಲ್ಲು ಹುಚ್ಚಾಟಗಳಿಗೆ ಇವರಿಬ್ಬರ ನಡುವಿನ ಸ್ನೇಹ ಸಂಬಂಧ ಎಷ್ಟೋ ಸಲ ಮುರಿದು ಬಿದ್ದಿದೆ. ಇದೂ ಹೀಗೆ ಮುಂದುವರಿದರೆ ಶಾಶ್ವತವಾಗಿ ಸಲ್ಲು ಸ್ನೇಹಕ್ಕೆ ಗುಡ್ ಬೈ ಹೇಳುವುದಾಗಿ ಕತ್ರಿನಾ ಎಚ್ಚರಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada