»   » ಛೋಟೆ ನವಾಬ್ ಸೈಫ್ ಗೆ ಫುಟ್ಬಾಲ್ ಹುಚ್ಚು

ಛೋಟೆ ನವಾಬ್ ಸೈಫ್ ಗೆ ಫುಟ್ಬಾಲ್ ಹುಚ್ಚು

Posted By:
Subscribe to Filmibeat Kannada

ಪರಂಪರಾಗತವಾಗಿ ಕ್ರಿಕೆಟ್ ಎಂಬುದು ತನ್ನ ರಕ್ತದಲ್ಲೇ ಅಡಕವಾಗಿದ್ದರೂ ಜೂನಿಯರ್ ಪಟೌಡಿಗೆ ಯಾಕೋ ಇತ್ತೀಚೆಗೆ ಕ್ರಿಕೆಟ್ ಮೇಲೆ ವ್ಯಾಮೋಹ ಕಡಿಮೆಯಾಗಿದೆ. ಟ್ವೆಂಟಿ20 ಕ್ರಿಕೆಟ್ ಕ್ರೇಜ್ ಹೋಗಿ ಫುಟ್ಬಾಲ್ ಆಟದ ಬಗ್ಗೆ ಸೈಫ್ ಅಲಿ ಖಾನ್ ಮಾತಾಡತೊಡಗಿದ್ದಾರೆ.

ಈ ಹಿಂದೆ ಕಾರೊಂದರ ಜಾಹೀರಾತಿನಲ್ಲಿ ಫುಟ್ಬಾಲ್ ಪಟುವಂತೆ 39 ವರ್ಷದ ಈ ಬಾಲಿವುಡ್ ನಟ ಕಾಣಿಸಿಕೊಂಡಿದ್ದರು. ಆದರೆ, ಸೈಫ್ ಕುಟುಂಬದಲ್ಲಿ ಕ್ರಿಕೆಟ್, ಸಿನಿಮಾದ್ದೇ ಸುದ್ದಿ,ಮನ್ಸೂರ್ ಅಲಿಖಾನ್ ಪಟೌಡಿ, ತಾತಾ ಇಫ್ತಿಕಾರ್ ಅಲಿ ಖಾನ್ ಪಟೌಡಿ ಭಾರತ ಕ್ರಿಕೆಟ್ ಜಗತ್ತಿನಲ್ಲಿ ಹೆಸರಾದವರು.

ಆದರೆ, ಸೈಫ್ ಅಲಿಖಾನ್ ಕ್ರಿಕೆಟ್ ಪಟುವಾಗದಿದ್ದರೂ, ಕ್ರಿಕೆಟ್ ಬಗ್ಗೆ ಒಲವು ಇಟ್ಟುಕೊಂಡಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ,ಕ್ರಿಕೆಟ್ 365 ದಿನಾನೂ ಇರುತ್ತೆ. ಆದರೆ, ನನಗೀಗ ವಿಶ್ವಕಪ್ ಫುಟ್ಬಾಲ್ ಮೇಲೆ ಮಾತ್ರ ಗಮನ. ಸಾಧ್ಯವಾದರೆ ದಕ್ಷಿಣ ಆಫ್ರಿಕಾಗೆ ಹೋಗಿ ಲೈವ್ ಮ್ಯಾಚ್ ನೋಡ್ಬೇಕು ಅನ್ಸುತ್ತೆ ಎಂದು ಸೈಫ್ ಉತ್ತರಿಸಿದರು.

ಜೂನ್.11ರಿಂದ ಶುರುವಾಗಲಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಗೆ ಸೈಫ್ ಹೋಗುವುದಿರಲಿ, ಮನೇಲಿ ಗೆಳತಿ ಕರೀನಾ ಜೊತೆ ಕೂತು ಪಂದ್ಯ ವೀಕ್ಷಿಸುವುದು ಕಷ್ಟ.ಈ ತಿಂಗಳ ಅಂತ್ಯಕ್ಕೆ ಸ್ವಂತ ಬ್ಯಾನರ್ ನಡಿಯಲ್ಲಿ ಏಜೆಂಟ್ ವಿನೋದ್ ಚಿತ್ರದ ಚಿತ್ರೀಕರಣದಲ್ಲಿ ಛೋಟೆ ನವಾಬ್ ಫುಲ್ ಬ್ಯುಸಿ ಆಗಿಬಿಟ್ಟಿರ್ತಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada