»   »  ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಂಧನ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಂಧನ

Subscribe to Filmibeat Kannada
Mumbai Police arrests Akshay Kumar in Obscenity Case
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಸೊಮವಾರ ಮುಂಬೈ ಉಪನಗರದ ವಕೋಲಾ ಪೊಲೀಸರು ಬಂಧಿಸಿ ನಂತರ ಜಾಮೀನ ಮೇಲೆ ಬಿಡುಗಡೆ ಮಾಡಿದರು. ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದಲ್ಯಾಕ್ಮೆ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ಹೆಂಡತಿ ಟ್ವಿಂಕಲ್ ಕನ್ನಾ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಸೋಮವಾರ ಅಕ್ಷಯ್ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಫ್ಯಾಷನ್ ವೀಕ್ ನಲ್ಲಿ ಅಕ್ಷಯ್ ಅವರ ಜೀನ್ಸ್ ನ ಗುಂಡಿಗಳನ್ನು ತೆಗೆದು ಅಸಭ್ಯವಾಗಿ ವರ್ತಿಸಿದ್ದರು ಎಂದು ಅನಿಲ್ ನಾಯರ್ ಎಂಬುವವರು ದೂರು ದಾಖಲಿಸಿದ್ದರು. ಈ ಬಗ್ಗೆ ವಿವರ ನೀಡಿದ ಮುಂಬೈ ಪೊಲೀಸ್ ಕಮೀಷನರ್ ಅರವಿಂದ್ ಮಹಾದದಿ, ಇಂದು ಬೆಳಗ್ಗೆ 8.30ಕ್ಕೆ ಅಕ್ಷಯ್ ಅವರನ್ನು ಬಂಧಿಸಲಾಯಿತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದರು.

ಅಕ್ಷಯ್ ಕಳೆದ ಒಂದು ತಿಂಗಳಿಂದ ವಿದೇಶದಲ್ಲಿದ್ದರು. ಭಾನುವಾರ ರಾತ್ರಿಯಷ್ಟೇ ಅವರು ಸ್ವದೇಶಕ್ಕೆ ಹಿಂತಿರುಗಿದ್ದರು. ''ತಮ್ಮ ವಕೀಲರೊಂದಿಗೆ ಬಂದಿದ್ದ ಅಕ್ಷಯ್ ಅವರಿಗೆ ಸುಲಭವಾಗಿ ಜಾಮೀನು ಸಿಕ್ಕಿತು. ಭಾರತೀಯ ದಂಡ ಸಂಹಿತೆ ಸೆಕ್ಷನ್ 294ರ ಪ್ರಕಾರ ಜಾಮೀನು ನೀಡಲಾಯಿತು '' ಎಂದು ಮಹಾದದಿ ತಿಳಿಸಿದರು. ಇದಕ್ಕೂ ಮುನ್ನ ಅಕ್ಷಯ್ ಅವರ ಹೆಂಡತಿ ಟ್ವಿಂಕಲ್ ಕನ್ನಾ ಅವರು ಸಹ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾಗಿದ್ದರು.

(ಏಜೆನ್ಸೀಸ್)

ಮಕದ್ದರ್ ಕಾ ಸಿಕಂದರ್ ಖ್ಯಾತಿಯ ಮೆಹ್ರಾ ನಿಧನ
ಬೆಳ್ಳಿತೆರೆಗೆ ಶ್ರುತಿ, ಮಹೇಂದರ್ ತೆರೆಮರೆಯ ಕತೆ!
ಹೊಡಿಮಗ ಅಸಭ್ಯ ದೃಶ್ಯಗಳ ಬಗ್ಗೆ ಶಿವಣ್ಣ ಪಶ್ಚಾತ್ತಾಪ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada