For Quick Alerts
  ALLOW NOTIFICATIONS  
  For Daily Alerts

  ಮದ್ಯಪಾನಕ್ಕೆ ಗುಡ್ ಬೈ ಹೇಳಿದ ಸಲ್ಮಾನ್ ಖಾನ್

  By Rajendra
  |

  ಕುಡುಕರ ಆಣೆ, ಪ್ರಮಾಣಗಳನ್ನು ಯಾರಾದರೂ ನಂಬುತ್ತಾರೆಯೇ? ಎಂದು ಗೇಲಿ ಮಾಡಬೇಡಿ. ಏಕೆಂದರೆ ಬಾಟಲಿ ಪ್ರಿಯನಾದ ನಮ್ಮ ಸಲ್ಮಾನ್ ಖಾನ್ ಯಾವುದೇ ಕಾರಣಕ್ಕೂ ಕೊಂಚ ದಿನಗಳ ಮಟ್ಟಿಗೆ ಎಣ್ಣೆ ಮುಟ್ಟಲ್ಲ ಎಂದು ಪ್ರಮಾಣ ಮಾಡಿದ್ದಾರೆ!

  ಇದೆಲ್ಲಾ 'ದಬಾಂಗ್' ಚಿತ್ರದಆಫ್ಟರ್ ಎಫೆಕ್ಟ್! 'ದಬಾಂಗ್' ಚಿತ್ರೀಕರಣದ ಬಳಿಕ ಸಲ್ಲು ತೂಕ ಸಿಕ್ಕಾಪಟ್ಟೆ ಹೆಚ್ಚಾಗಿದೆಯಂತೆ. ದೇಹದ ಕೊಬ್ಬನ್ನು ಕರಗಿಸಲು ಸಲ್ಲು ಈ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಮುಂದಿನ ಚಿತ್ರ 'ಮೈ ಲವ್ ಸ್ಟೋರಿ' ಚಿತ್ರೀಕರಣ ಸಂಪೂರ್ಣ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಬಾಟಲಿ ಮುಟ್ಟಲ್ಲ ಎಂದಿದ್ದಾರೆ.

  ಸಲ್ಲು ಸುಮ್ಮನೆ ಹಾಗೆ ಹೇಳಿಲ್ಲ, ತಮ್ಮ ಭಾವ ಅತುಲ್ ಅಗ್ನಿಹೋತ್ರಿ ಬಳಿ ಹಾಗಂತ ಪ್ರಮಾಣ ಮಾಡಿದ್ದಾರೆ. ಚಿತ್ರದಲ್ಲಿ ಏಕಾಗ್ರತೆಯಿಂದ ಕೆಲಸ ಮಾಡಲು.ತನ್ನಲ್ಲಿನ ಉತ್ತಮ ಅಭಿನಯ ಸಾಮರ್ಥ್ಯವನ್ನು ಹೊರತೆಗೆಯಲು ಹಾಗೂ ಹೆಚ್ಚಿನ ಕಸರತ್ತು ಮಾಡಿ ದೇಹವನ್ನು ಸಿಕ್ಸ್ ಪ್ಯಾಕ್‌ಗೆ ತರುವ ಯೋಜನೆ ಅವರದು.

  ಗುಂಡು ಪ್ರಿಯರು ಎಷ್ಟೇ ಶಪಥ, ಆಣೆ ಮಾಡಿದರೂ ಸಂಜೆಯಾಗುತ್ತಿದ್ದಂತೆ ಕಾಲುಗಳು ತನ್ನಷ್ಟಕ್ಕೆ ತಾನೆ ಬಾರಿನತ್ತ ಎಳೆದುಕೊಂಡು ಹೋಗುವುದು ಸಾಮಾನ್ಯ. ಬಳಿಕ ರಸ್ತೆ ಅಳೆಯುವುದು ಮಾಮೂಲು. ಸಲ್ಲು ಮಾತ್ರ 22 ದಿನ ಒಂದೇ ಒಂದು ತೊಟ್ಟು ಮದ್ಯ ಮುಟ್ಟಲ್ಲ ಎಂದು ಪ್ರಮಾಣ ಮಾಡಿದ್ದಾರೆ.

  ಇತ್ತೀಚೆಗೆ 'ದಬಾಂಗ್' ಹಾಗೂ 'ಬಿಗ್ ಬಾಸ್ 4' ಯಶಸ್ವಿಯಾದ ಕಾರಣ ಸಲ್ಲು ಬಾಟಲಿಗೆ ದಾಸನಾಗಿದ್ದ. ವರ್ಷಪೂರ್ತಿ ಬಾಟಲಿಯೊಂದಿಗೆ ಸರಸವಾಡುವ ಸಲ್ಲು ಕೆಲವು ಕಟ್ಟುನಿಟ್ಟಿನ ವ್ರತಗಳನ್ನು ಕೈಗೊಂಡಿದ್ದಾರೆ. ಅದೇನೆಂದರೆ, ಅಪ್ಪಿ ತಪ್ಪಿ ಕೂಡ ರಂಜಾನ್ ಹಾಗೂ ಗಣೇಶ ಚತುರ್ಥಿ ದಿನ ಯಾವುದೇ ಕಾರಣಕ್ಕೂ ಎಣ್ಣೆ ಮುಟ್ಟಲ್ಲ ಎಂಬುದು. [ಮದ್ಯಪಾನ]

  English summary
  Salman Khan is not less than any other star when it comes to dedication and he has proved it recently. The actor has promised to quit alcohol until he finishes the shooting of his next film My Love Story by his brother-in-law Atul Agnihotri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X