»   » ಜಾವೇದ್ ಗುಣಗಾನ ಮಾಡಿದ ಠಾಕ್ರೆ

ಜಾವೇದ್ ಗುಣಗಾನ ಮಾಡಿದ ಠಾಕ್ರೆ

Posted By:
Subscribe to Filmibeat Kannada

ಮುಂಬೈ, ಮೇ.19:ಉದ್ಯೋಗಸ್ಥ ಮುಸ್ಲಿಂ ಮಹಿಳೆ ವಿರುದ್ಧ ಹೊರಡಿಸಲಾಗಿದ್ದ ಫತ್ವಾ ವಿರೋಧಿಸಿ ಹೇಳಿಕೆ ನೀಡಿದ್ದ ಖ್ಯಾತ ಚಿತ್ರ ಸಾಹಿತಿ ಜಾವೇದ್ ಅಖ್ತರ್‌ರನ್ನು ಶಿವಸೇನೆ ಶ್ಲಾಘಿಸಿದೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಜಾವೇದ್ ವಿಚಾರ ಪ್ರಸ್ತಾಪಿಸಿ, ಜಾವೇದ್ ಹಾಗೂ ಆತನ ಸ್ನೇಹಿತ ಸಲೀಮ್ ನಿಜವಾದ ಮುಸ್ಲಿಮರೆಂದು ಬಾಳಾಠಾಕ್ರೆ ಅವರು ತಮ್ಮ ಸಂಪಾದಕೀಯದಲ್ಲಿ ಗುಣಗಾನ ಮಾಡಿದ್ದಾರೆ.

ಜನರ ಭಾವನೆಗಳ ವಿಚಾರದಲ್ಲಿ ಜಾವೇದ್ ಮೂಲಭೂತವಾದಿಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದಾರೆ. ಜಾವೇದ್ ಹಾಗೂ ಸಲೀಮ್ ಇಬ್ಬರು ಕೂಡ ಮುಸ್ಲಿಮರ ವಿರುದ್ಧ ದೌರ್ಜನ್ಯವೆದ್ದಾಗ ದನಿಯೆತ್ತುತ್ತಾರೆ. ಈ ಮೂಲಕ ಮೂಲಭೂತವಾದಿಗಳಿಗೆ ಸವಾಲು ಹಾಕುತ್ತಾರೆ. ಹಾಗೆಯೇ ಇಂತಹ ನಿಲುವು ಕೈಗೊಳ್ಳುವಾಗ ಬೆದರಿಕೆಗಳು ಎದುರಾಗುವುದು ಸಹಜ. ಏನೇ ಆದರೂ ಇವರಿಬ್ಬರ ನಿಲುವು ನಿಜಕ್ಕೂ ಶ್ಲಾಘನೀಯ ಎಂದು ಠಾಕ್ರೆ ಶ್ಲಾಘಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada