»   » ಹೀಗೊಂದು ಸೈಫ್ ಮತ್ತು ಕರೀನಾಳ ಪ್ರೇಮಪ್ರಸಂಗವೂ

ಹೀಗೊಂದು ಸೈಫ್ ಮತ್ತು ಕರೀನಾಳ ಪ್ರೇಮಪ್ರಸಂಗವೂ

Posted By:
Subscribe to Filmibeat Kannada

ಬೆಂಗಳೂರು, ಅ.20 : ಬಾಲಿವುಡ್ ಬೆಡಗಿಯರ ಚಂಚಲ ಬುದ್ಧಿಗೆ ಮತ್ತೊಂದು ಉದಾಹರಣೆ ಕರೀನಾ ಕಪೂರ್. ಕರೀನಾ ಮತ್ತು ಸೈಫ್ ಆಲಿಖಾನ್ ನಡುವಿನ ಗುಸುಗುಸು ಬಾಲಿವುಡ್ ವಲಯದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ವಿಷಯ.

ಮೊನ್ನೆ ಮುಂಬೈಯಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ಷೋಗೆ ಕರೀನಾ-ಸೈಫ್ ಕೈಕೈ ಹಿಡಿದುಕೊಂಡು ಬಂದಾಗ ಅಲ್ಲಿದ್ದವರ ಕಣ್ಣುಕುಕ್ಕಿತ್ತು. ಇಬ್ಬರನ್ನೂ ಅನುಮಾನದಿಂದ ನೋಡಿದ್ದರು. ನಮ್ಮ ಮಾಧ್ಯಮದವರಂತೂ ಈ ಬಗ್ಗೆ ಕೇಳಿಯೇ ಬಿಟ್ಟರು. ನನ್ನ ಮತ್ತು ಶಾಹೀದ್ ಕಪೂರ್ ನಡುವಿನ ಹಳೆಯ ಕತೆ ಈಗ ಬೇಡ. ನಮ್ಮ ನಡುವಿನ ಸಂಬಂಧವೇನು ದೇಶದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುವುದಿಲ್ಲ. ನಮ್ಮ ಬದುಕು ಹಾಗೂ ಕನಸುಗಳನ್ನು ನಾವು ರೂಪಿಸಿಕೊಳ್ಳುತ್ತಿದ್ದೇವೆ ಅಷ್ಟೇ ಎಂದು ಕರೀನಾ ನೇರ ಪ್ರತಿಕ್ರಿಯಿಸಿದನ್ನು ಕೇಳಿ ದಂಗಾದರು.

ಕರೀನಾಳ ಹಿಂದಿನ ಕತೆಯನ್ನು ಸ್ವಲ್ಪ ಕೆದಕಿದರೆ ಶಾಹೀದ್ ಜೊತೆಗಿನ ಪ್ರೇಮಪ್ರಸಂಗ ನೆನಪಾಗುತ್ತದೆ. ಶಾಹೀದ್ ಮತ್ತು ಕರೀನಾಳ ನಡುವಿನ ಪ್ರೀತಿ ನೆನ್ನೆ ಮೊನ್ನೆಯದಲ್ಲ. ಮೂರ್ನಾಲ್ಕು ವರ್ಷಗಳಷ್ಟು ಹಳೆಯದು. ಇಬ್ಬರೂ ಕೈಕೈ ಹಿಡಿದು ಓಡಾಡುವ ಫೋಟೋಗಳು ಸಾಕಷ್ಟು ಪತ್ರಿಕೆಗಳಲ್ಲಿ ಕಾಣಿಸಿಕೊಂಡವು ಸಹ. ಇವರಿಬ್ಬರ ನಡುವಿನ ಪ್ರೀತಿಯ ಗುಟ್ಟು ಗುಟ್ಟಾಗೇನು ಉಳಿದಿರಲಿಲ್ಲ. ಇನ್ನೇನು ಮದುವೆಗೆ ಹತ್ತಿರ ಹತ್ತಿರ ಬಂದಿತ್ತು ಯಾಕೋ ಏನೋ ಕೈಬಿಟ್ಟಳು. ಈಗ ಸೈಫ್‌ನ ಕೈ ಹಿಡಿದಿದ್ದಾಳೆ.

ಹಾಗೆ ನೋಡಿದರೆ ಸೈಫ್ ಆಲಿಖಾನ್ ಏನು ಸಾಚಾ ಅಲ್ಲ. ಬಾಲಿವುಡ್‌ ಬಿನ್ನಾಣಗಿತ್ತಿಯರಾದ ದಿಯಾ ಮಿರ್ಜಾ, ಯಾನಾಗುಪ್ತ, ಬಿಪಾಶಾರ ಪಾಶದಲ್ಲಿ ಸಿಲುಕಿದ್ದವನು. ಈಗಾಗಲೇ ಪತ್ನಿ ಅಮೃತಾಳಿಂದ ವಿಚ್ಛೇದನವನ್ನೂ ಪಡೆದಿದ್ದಾನೆ. ಇಟಲಿಯ ಸುಂದರಿ ರೋಜಾ ಜೊತೆಗೂ ಒಂದಷ್ಟು ದಿನ ಓಡಾಡಿಕೊಂಡಿದ್ದ. ಈಗ ಅವಳೂ ಕಾಣಿಸುತ್ತಿಲ್ಲ. ಖಾಲಿಯಾದ ಜಾಗದಲ್ಲಿ ಕರೀನಾ ಬಂದು ಕುಳಿತಿದ್ದಾಳೆ. ನಮ್ಮ ಸಂಬಂಧವನ್ನು ಜಗತ್ತಿಗೇ ಸಾರುವ ಅಗತ್ಯವಿಲ್ಲ. ಕರೀನಾಳೊಂದಿಗಿನ ಬದುಕು ಖುಷಿ ತಂದಿದೆ ಎನ್ನುತ್ತಾನೆ ಸೈಫ್. ಅದೇನೋ ಹೇಳ್ತಾರಲ್ಲ ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತ ಛೇ!

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada