For Quick Alerts
  ALLOW NOTIFICATIONS  
  For Daily Alerts

  ತಾರೆ ಲಾರಾ ದತ್ತ, ಮಹೇಶ್ ಭೂಪತಿಗೆ ಹೆಣ್ಣು ಮಗು

  By Rajendra
  |

  ತಾರೆ ಲಾರಾ ದತ್ತಾಗೆ ಹೆಣ್ಣು ಮಗುವಾಗಿದೆ. ಈ ಸುದ್ದಿಯನ್ನು ಮಹೇಶ್ ಭೂಪತಿ ಟ್ವೀಟಿಸಿದ್ದು, "ITS A GIRL!!!!!!!!!!!!!!!!!! @DuttaLara. I Love u….," ಎಂದಿದ್ದಾರೆ. ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ ಭೂಪತಿ ತಿಳಿಸಿದ್ದಾರೆ.

  ಟೆನ್ನಿಸ್ ತಾರೆ ಮಹೇಶ್ ಭೂಪತಿ ಹಾಗೂ ಲಾರಾ ದತ್ತ ಫೆಬ್ರವರಿ 2011ರಲ್ಲಿ ಮದುವೆಯಾಗಿದ್ದರು. ಆಗಸ್ಟ್ 2011ರಲ್ಲಿ ಲಾರಾ ಗರ್ಭಿಣಿ ಎಂಬ ಸುದ್ದಿ ಹೊರಬಿದ್ದಿತ್ತು. ಈಗಾಗಲೆ ಬಾಲಿವುಡ್‌ನಲ್ಲಿ ಐಶ್ವರ್ಯ ರೈ ಅಮ್ಮನಾಗಿದ್ದಾರೆ. ಇನ್ನೇನು ಶಿಲ್ಪಾ ಶೆಟ್ಟಿ ಕಂದನ ನಿರೀಕ್ಷೆಯಲ್ಲಿದ್ದಾರೆ. ಈಗ ಅದೇ ಸಾಲಿಗೆ ಲಾರಾ ದತ್ತ ಸೇರ್ಪಡೆಯಾಗಿದ್ದಾರೆ.

  ವಿಶೇಷ ಅಂದ್ರೆ ಲಾರಾ ದತ್ತ ಗರ್ಭಿಣಿ ಆದ ಮೇಲೆ ತಮ್ಮ ಹೆಚ್ಚಿನ ಸಮಯವನ್ನು ಮುಂಬೈಗಿಂತ ಬೆಂಗಳೂರಿನಲ್ಲೇ ಕಳೆದಿದ್ದರು. 'ಚಲೋ ದಿಲ್ಲಿ' ಹಾಗೂ 'ಡಾನ್ 2' ಚಿತ್ರಗಳ ಬಳಿಕ ಲಾರಾ ದತ್ತ ಯಾವುದೇ ಚಿತ್ರಗಳಿಗೆ ಸಹಿಹಾಕಿರಲಿಲ್ಲ. ಬಾಲಿವುಡ್‌ನಲ್ಲಿ ಅಮ್ಮಂದಿರ ಪರ್ವ ಶುರುವಾಗಿದೆ. (ಏಜೆನ್ಸೀಸ್)

  English summary
  Bollywood actress Lara Dutta blessed with a baby girl.Lara Dutta married the tennis star Mahesh Bhupathi in February 2011 and revealed her pregnancy in August 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X