For Quick Alerts
  ALLOW NOTIFICATIONS  
  For Daily Alerts

  ವರ್ಮಾ 'ಭೂತ'ವಾಗಿ ಬಂದ ಮನಿಷಾ ಕೊಯಿರಾಲಾ

  |

  ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಹಾಟ್ ಬೆಡಗಿಯಾಗಿ ಮಿಂಚಿದ್ದ ನಟಿ ಮನಿಷಾ ಕೊಯಿರಾಲಾ, ಇದೀಗ ಮತ್ತೆ ಮಿಂಚಲು ಸಿದ್ಧರಾಗಿದ್ದಾರೆ. ಅದೂ ಕೂಡ ಪ್ರಮುಖ ಪಾತ್ರವೊಂದರಲ್ಲಿ, ಹಿಂದಿಯ ಹೆಸರಾಂತ ನಿರ್ದೇಶಕರ ಚಿತ್ರದಲ್ಲಿ. ಅವರೀಗ ನಟಿಸಲಿರುವ ಚಿತ್ರದ ಹೆಸರು 'ಭೂತ್ 2'. ಈ ಚಿತ್ರ ಸಂಪೂರ್ಣ 'ಹಾರರ್'ಮಯ ಎನ್ನಲಾಗಿದೆ. ಮದುವೆ, ಗಂಡ ಎಂದು ಹಿಂದಿ ಚಿತ್ರರಂಗದಿಂದ ದೂರವಾಗಿದ್ದ ಮನಿಷಾ ಮತ್ತೆ ಮೇಕಪ್ ಹಚ್ಚಿ ಗಟ್ಟಿಯಾಗಿ ನೆಲೆನಿಲ್ಲಲು ಮನಸ್ಸು ಮಾಡಿದ್ದಾರೆ.

  ಬರಲಿರುವ ಭೂತ್ 2 ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರ. ಈ ಮೊದಲು ಬಂದಿದ್ದ 'ಭೂತ್'ನಲ್ಲಿ ಅಜಯ್ ದೇವಗನ್ ಹಾಗೂ ಊರ್ಮಿಳಾ ಮಾತೊಂಡ್ಕರ್ ನಟಿಸಿದ್ದರು. ಬರಲಿರುವ 'ಭೂತ್ 2' ನಲ್ಲಿ ಸಂಜಯ್ ದತ್ ಹಾಗೂ ಮನಿಷಾ ಪ್ರಮುಖ ಪಾತ್ರ ಪೋಷಿಸುಲಿದ್ದು, ಉಳಿದ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಈ ಚಿತ್ರದ ಕಥೆಯನ್ನು ವರ್ಮಾ 6 ವರ್ಷದ ಮಗುವಿನ ಮೇಲೆ ಕೇಂದ್ರೀಕರಿಸಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ವರ್ಮಾ ಮಾತ್ರ ಇದನ್ನು ಸ್ಪಷ್ಟಪಡಿಸಿಲ್ಲ.

  ಈ ಮೊದಲು ಮನಿಷಾ ಕೊಯಿರಾಲಾ "ನಾನು ದೊಡ್ಡ ದೊಡ್ಡ ಚಿತ್ರಗಳಿಗೆ ಸಹಿ ಮಾಡಿದ್ದೇನೆ" ಎಂದಿದ್ದರು. ಆದರೆ ಯಾರ, ಯಾವ ಚಿತ್ರವೆಂಬ ಗುಟ್ಟು ರಟ್ಟು ಮಾಡಿರಲಿಲ್ಲ. ಅದರಲ್ಲೊಂದು ರಾಮ್ ಗೋಪಾಲ್ ವರ್ಮಾರ 'ಭೂತ್ 2' ಎಂಬುದೀಗ ಜಗಜ್ಜಾಹೀರಾಗಿದೆ. ಇನ್ನೂ ಬಾಲಿವುಡ್ ನ ಯಾವ್ಯಾವ ಚಿತ್ರಗಳು ಮನಿಷಾ ಕೈಹಿಡಿದಿವೆ ಎಂಬುದು ಮುಂದೆ ಒಂದೊಂದಾಗಿ ಬಯಲಾಗಲಿದೆ. ಮತ್ತೆ ಮನಿಷಾ ಮೊದಲಿನಂತೆ ಮಿಂಚಬಹುದೇ? (ಏಜೆನ್ಸೀಸ್)

  English summary
  Actress Manisha Koirala acts Ramgopal Varma upcoming movie Bhooth Sequel. She performs in an important role. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X