For Quick Alerts
  ALLOW NOTIFICATIONS  
  For Daily Alerts

  'ಪದ್ಮಶ್ರೀ' ಸೈಫ್ ಅಲಿ ಖಾನ್ ಬಂಧನ, ಬಿಡುಗಡೆ

  By Prasad
  |

  ಮುಂಬೈ, ಫೆ. 22 : ಎನ್ಆರ್‌ಐ ಉದ್ಯಮಿಗೆ ಗುದ್ದಿ ಮೂಗು ಮುರಿದಿದ್ದಕ್ಕಾಗಿ ಬಾಲಿವುಡ್ ನಟ 'ಪದ್ಮಶ್ರೀ' ಸೈಫ್ ಅಲಿ ಖಾನ್ ಮತ್ತು ಇಬ್ಬರು ಸ್ನೇಹಿತರನ್ನು ಕೊಲಾಬಾ ಪೊಲೀಸರು ಬುಧವಾರ ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

  ಪ್ರತಿಷ್ಠಿತ ತಾಜ್ ಹೋಟೆಲ್‌ನ ವಾಸಾಬಿ ರೆಸ್ಟೋರೆಂಟ್‌ನಲ್ಲಿ ತಮ್ಮನ್ನು 'ಈಡಿಯಟ್' ಅಂತ ಕರೆದಿದ್ದಲ್ಲದೆ ಸೈಫ್ ಮತ್ತಿತರರು ಆಕ್ರಮಣ ಮಾಡಿದ್ದರು ಎಂದು ದಕ್ಷಿಣ ಆಫ್ರಿಕಾದ ಉದ್ಯಮಿ ಇಕ್ಬಾಲ್ ಶರ್ಮಾ ದೂರು ನೀಡಿದ್ದರು. ಬಂಧನದ ಭಯದಿಂದಾಗಿ ಸೈಫ್ ಮತ್ತಿತರರು ತಲೆತಪ್ಪಿಸಿಕೊಂಡಿದ್ದರು.

  ಆಗಿದ್ದೇನೆಂದರೆ, ತಾಜ್ ಹೋಟೆಲಿನಲ್ಲಿ ಇಕ್ಬಾಲ್ ಕುಳಿತಿದ್ದ ಟೇಬಲ್‌ನ ಪಕ್ಕದಲ್ಲಿ ಸೈಫ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ಅಮೃತಾ ಆರೋರಾ, ಆಕೆಯ ಪತಿ ಶಕೀಲ್ ಲಡಾಕ್ ಮತ್ತು ಬಿಲಾಲ್ ಅಮ್ರೋಹಿ ಕುಳಿತಿದ್ದರು. ಅವರ ವಿಪರೀತ ಕೂಗಾಟವನ್ನು ಆಕ್ಷೇಪಿಸಿದಾಗ 'ಏ ಈಡಿಯಟ್, ನಾನ್ಯಾರೆಂದು ಗೊತ್ತಿಲ್ವಾ' ಎಂದು ಸೈಫ್ ಕಿರುಚಿದ್ದ ಮತ್ತು ಆಕ್ರಮಣ ನಡೆಸಿದ್ದ ಎಂದು ಇಕ್ಬಾಲ್ ದೂರಿದ್ದರು.

  ಆದರೆ, ನಾನಾಗಿಯೇ ಇಕ್ಬಾಲ್‌ನನ್ನು ಹೊಡೆದಿಲ್ಲ. ಅವರೇ ನನ್ನ ಮೇಲೆ ಆಕ್ರಮಣ ಮಾಡಲು ಬಂದಾಗ ತಿರುಗೇಟು ನೀಡಬೇಕಾಯಿತು. ನನ್ನ ಸ್ಥಾನದಲ್ಲಿ ಬೇರೆ ಯಾರೇ ಆಗಿದ್ದರೂ ಇದನ್ನೇ ಮಾಡುತ್ತಿದ್ದರು ಎಂದು ಸೈಫ್ ಅಲಿ ಖಾನ್ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ.

  ಇತ್ತೀಚೆಗೆ ತಾನೆ ಪಟೌಡಿ ನವಾಬ್ ಆಗಿರುವ ಸೈಫ್ ಅಲಿ ಖಾನ್ ಅವರ ವಿರುದ್ಧ ಹಿಂದೆ ಕೂಡ ಪೊಲೀಸ್ ಕೇಸ್ ದಾಖಲಾಗಿತ್ತು. ರಾಜಸ್ತಾನದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದಕ್ಕಾಗಿ ಸಾಕಷ್ಟು ಬಾರಿ ನ್ಯಾಯಾಲಯಕ್ಕೆ ಅಲೆದಾಡಿದ್ದಾರೆ. 2008ರಲ್ಲಿ ಕೂಡ ಪಟಿಯಾಲಾದಲ್ಲಿ ಛಾಯಾಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದರು.

  ರಾಯಲ್ ಸ್ಟಾಗ್, ಲೆನೊವೊ, ರಾಯಲ್ ಏಷ್ಯನ್ ಪೇಂಟ್ಸ್, ಪ್ರೊವೋಗ್, ಏರ್ ಟೆಲ್, ಪೆಪ್ಸಿಕೋ ಲೇಸ್, ತಾಜ್ ಮಹಲ್ ಚಹಾ ಮುಂತಾದ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಡರ್ ಆಗಿರುವ ಪ್ರತಿಭಾವಂತ ನಟ ಸಾರ್ವಜನಿಕವಾಗಿ ಹೀಗೆ ಮಾಡಬಹುದೆ?

  English summary
  Bollywood film actress 'Padma Sri' Saif Ali Khan and two others have been arrested and released on bail, after they were involved in brawl with NRI businessman at Taj Hotel in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X