»   »  ಏಡ್ಸ್ ಕುರಿತ ಚಿತ್ರದಲ್ಲಿ ಅಮೀರ್ ಜತೆ ಟಬು

ಏಡ್ಸ್ ಕುರಿತ ಚಿತ್ರದಲ್ಲಿ ಅಮೀರ್ ಜತೆ ಟಬು

Subscribe to Filmibeat Kannada

ಏಡ್ಸ್ ರೋಗದ ಕಥಾವಸ್ತುವನ್ನಿಟ್ಟುಕೊಂಡು ಪ್ರಿಯದರ್ಶನ್ ಚಿತ್ರಕತೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರಕಾಶ್ ರೈ ನಟಿಸಿದ್ದ 'ಕಾಂಜೀವರಂ' ರೀತಿಯಲ್ಲೇ ಇದೂ ನೈಜ ರೀತಿಯಲ್ಲಿ ತೆರೆಗೆ ತರಲಾಗುತ್ತದೆ ಎಂಬ ವಿಶ್ವಾಸವನ್ನು ಪ್ರಿಯದರ್ಶನ್ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದಲ್ಲಿ ಅಮೀರ್ ಖಾನ್ ನಾಯಕ ನಟನಾಗಿ ಅಭಿಯನಯಿಸಲು ಒಪ್ಪಿಗೆ ಸೂಚಿಸಿದ್ದಾರಂತೆ. ಅವರಿಗೆ ಜತೆಯಾಗಿ ಟಬು ನಟಿಸಲಿದ್ದಾರೆ. ಅಂದಹಾಗೆ ಅಮೀರ್, ಟಬು ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲು. ಹಿಂದಿಯ 'ಫನಾ' ಚಿತ್ರದಲ್ಲಿ ಟಬು ಇದ್ದರೂ ಆಕೆಯೊಂದಿಗೆ ಅಮೀರ್ ಯಾವುದೇ ಸನ್ನಿವೇಶದಲ್ಲೂ ನಟಿಸಿರಲಿಲ್ಲ.

ತಮ್ಮ ಚಿತ್ರದ ಬಗ್ಗೆ ಪ್ರಿಯದರ್ಶನ್ ಮಾತನಾಡುತ್ತಾ, ಕಾಂಜೀವರಂ ಚಿತ್ರಕ್ಕೆ ಬಂದ ಪ್ರತಿಕ್ರಿಯೆ ನನ್ನಲ್ಲಿ ಮತ್ತಷ್ಟು ಉತ್ಸಾಹವನ್ನು ತುಂಬಿದೆ. ನೈಜ ಮತ್ತು ಸಹಜತೆಗೆ ಹತ್ತಿರವಾಗಿರುವ ಕತೆಯನ್ನು ಮತ್ತೊಮ್ಮೆ ಎತ್ತಿಕೊಂಡಿದ್ದೇನೆ. ಕಥಾವಸ್ತುವಿನ ಬಗ್ಗೆ ಹಲವರೊಂದಿಗೆ ಚರ್ಚಿಸುತ್ತಿದ್ದೇನೆ. ಕತೆ ಕೇಳಿದ ಕೂಡಲೆ ಅಮೀರ್ ತುಂಬಾ ಚೆನ್ನಾಗಿದೆ ಚಿತ್ರದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಪೂರ್ಣ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಪ್ರಿಯದರ್ಶನ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada