»   »  ಬಾಲಿವುಡ್ ಬಾಲೆ ಶಿಲ್ಪಾಶೆಟ್ಟಿಗೆ ಶನಿವಾರ ನಿಶ್ಚಿತಾರ್ಥ

ಬಾಲಿವುಡ್ ಬಾಲೆ ಶಿಲ್ಪಾಶೆಟ್ಟಿಗೆ ಶನಿವಾರ ನಿಶ್ಚಿತಾರ್ಥ

Subscribe to Filmibeat Kannada

ಮಂಗಳೂರು ಬೆಡಗಿ ಯಾನೆ ಬಾಲಿವುಡ್ ಬಾಲೆ ಶಿಲ್ಪಾಶೆಟ್ಟಿ ಗೆ ಕಡೆಗೂ ಕಂಕಣಬಲ ಕೂಡಿಬಂದಿದೆ. ಲಂಡನ್ ಉದ್ಯಮಿ ರಾಜ್ ಕುಂದ್ರಾ ಜೊತೆಗೆ ಶನಿವಾರ ಶಿಲ್ಪಾಶೆಟ್ಟಿ ನಿಶ್ಚಿತಾರ್ಥನಡೆಯಲಿದೆ. ರಾಜ್ ಕುಂದ್ರಾ ಅವರ ಮುಂಬೈನ ಜುಹು ನಿವಾಸದಲ್ಲಿ ನಿಶ್ಚಿತಾರ್ಥದ ಸಂಭ್ರಮ ಕಳೆಗಟ್ಟಿದೆ.

ಹಿಂದು ಪಂಚಾಂಗದ ಪ್ರಕಾರ ಶನಿವಾರ(ಅ.24) ಪವಿತ್ರವಾದ ದಿನವಂತೆ. ಹಾಗಾಗಿ ಇವರಿಬ್ಬರೂ ತಡಮಾಡದೆ ನಿಶ್ಚಿತಾರ್ಥಕ್ಕೆ ಅಣಿಯಾಗಿದ್ದಾರೆ. ತರಾತುರಿಯಾಗಿ ನಿರ್ಧಾರವಾಗಿರುವ ಕಾರಣ ಶಿಲ್ಪಾಶೆಟ್ಟಿ ತಂಗಿ ಶಮಿತಾ ಶೆಟ್ಟಿ ಸಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುತ್ತವೆ ಮೂಲಗಳು.

ನವವಧು ಶಿಲ್ಪಾಶೆಟ್ಟಿಗೆ ಮನೀಶ್ ಮಲ್ಹೋತ್ರಾ ಸೀರೆ ಉಡಿಸಿ ಅಲಂಕಾರ ಮಾಡಲಿದ್ದಾರೆ. ವರ ರಾಜ್ ಕುಂದ್ರಾ ಮಾತ್ರ ಸ್ವತಃ ಅವರೇ ಡ್ರೆಸ್ ಮಾಡಿಕೊಂಡು ನಿಶ್ಚಿತಾರ್ಥಕ್ಕೆ ಸಿದ್ಧವಾಗಲಿದ್ದಾರೆ. ಅಂದಹಾಗೆ ನಿಶ್ಚಿತಾರ್ಥಕ್ಕೆ ಶಿಲ್ಪಾಶೆಟ್ಟಿ ಯಾರನ್ನೂ ಆಹ್ವಾನಿಸುತ್ತಿಲ್ಲವಂತೆ. ಕೇವಲ ಹಿರಿಯರ ನಡುವೆ ಖಾಸಗಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.

ರಾಜ್ ಕುಂದ್ರಾ ಮತ್ತು ಶಿಲ್ಪಾ ನಡುವಿನ ಪ್ರೇಮ ವ್ಯವಹಾರ ನೆನ್ನೆ ಮೊನ್ನೆಯದಲ್ಲ. ಯುಕೆಯಲ್ಲಿ ನಡೆದ ಜನಪ್ರಿಯ ರಿಲಾಲಿಟಿ ಶೋ 'ಬಿಗ್ ಬ್ರದರ್'ನಿಂದ ಶಿಲ್ಪಾಶೆಟ್ಟಿ ಹೊರಬಿದ್ದ ನಂತರ ರಾಜ್ ಕುಂದ್ರಾ ಕಣ್ಣಿಗೆ ಬಿದ್ದಿದ್ದರು. ಸುಗಂಧ ತೈಲವೊಂದರ ಬ್ರಾಂಡ್ ಹೊರತರಲು ಶಿಲ್ಪಾಶೆಟ್ಟಿಗೆ ರಾಜ್ ಕುಂದ್ರಾ ನೆರವಾಗಿದ್ದರು. ಅಲ್ಲಿಂದ ಇವರಿಬ್ಬರ ನಡುವಿನ ಸ್ನೇಹ ಸಂಬಂಧ ಚಿಗುರೊಡೆದಿತ್ತು. ಸ್ನೇಹದ ಬಳ್ಳಿ ಇವರಿಬ್ಬರನ್ನೂ ಪ್ರೇಮದಲ್ಲಿ ಬಂಧಿಸಿತು.

''ಲಂಡನ್ ನಲ್ಲಿ ನನ್ನದೆ ಆದ ಮನೆ ಇದೆ. ಆದರೆ ಅಲ್ಲಿ ನಿಶ್ಚಿತಾರ್ಥದಂತಹ ಕಾರ್ಯಕ್ರಮಗಳಿಗೆ ಬಂಧು ಮಿತ್ರರು ಅಂತ ಯಾರೂ ಇಲ್ಲ. ಹಾಗಾಗಿ ಮುಂಬೈನಲ್ಲೇ ನಮ್ಮ ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದೆವು'' ಎನ್ನುತ್ತಾರೆ ರಾಜ್ ಕುಂದ್ರಾ. ಮದುಮಗನಿಗೂ ಮದುಮಗಳಿಗೂ ಶುಭಾಶಯ ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ!!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada