»   »  ರಾಖಿ ವಿರುದ್ಧ ತಿರಸ್ಕೃತ ಪ್ರೇಮಿ ಕ್ರಿಮಿನಲ್ ಕೇಸ್!

ರಾಖಿ ವಿರುದ್ಧ ತಿರಸ್ಕೃತ ಪ್ರೇಮಿ ಕ್ರಿಮಿನಲ್ ಕೇಸ್!

Posted By:
Subscribe to Filmibeat Kannada

ಐಟಂ ಬೆಡಗಿ ರಾಖಿ ಸಾವಂತ್ ವಿರುದ್ಧ ಆಕೆಯ ತಿರಸ್ಕೃತ ಪ್ರೇಮಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಆದರೆ ರಾಖಿ ಸಾವಂತ್ ಮಾತ್ರ ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ 'ತಿರಸ್ಕೃತ ಭಾವಿ ಪತಿ' ಜತೆ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ.

ಪಂಜಾಬ್ ನ ಜತಿನ್ ಶರ್ಮ(24) ಎಂಬ ಯುವಕ ರಾಖಿ ಸಾವಂತ್ ತನಗೆ ಮೋಸ ಮಾಡಿದ್ದಾಳೆ ಎಂದು ನ್ಯಾಯಾಲಕ್ಕೆ ಮೊರೆ ಹೋಗಿದ್ದಾನೆ. ರಾಖಿ ವಿರುದ್ಧ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ಹೂಡಿದ್ದಾನೆ.

ಸೂಕ್ತ ವರನಿಗಾಗಿ ರಾಖಿ ಸಾವಂತ್ ಸ್ವಯಂವರ ರಿಯಾಲಿಟಿ ಶೋ ಏರ್ಪಡಿಸಿದ್ದು ಗೊತ್ತೆ ಇದೆಯಲ್ಲಾ. 'ರಾಖಿ ಕಾ ಸ್ವಯಂವರ' ನೋಡಿದ ಮೇಲೆ ಆಕೆಯನ್ನು ವರಿಸಲು ಜತಿನ್ ಇನ್ನಿಲ್ಲದ ಪ್ರಯತ್ನ ಮಾಡಿದ್ದನಂತೆ. ಎದೆ ಮತ್ತು ಕೈ ಮೇಲೆ ರಾಖಿಯ ಹಚ್ಚೆ ಹಾಕಿಸಿಕೊಂಡಿದ್ದನಂತೆ. ಇನ್ನೂ ಏನೇನೋ ಸಾಹಸ ಮಾಡಿ ಆಸ್ಪತ್ರೆ ಪಾಲಾಗಿದ್ದೆ ಎನ್ನುತ್ತಾನೆ ಜತಿನ್.

ಅಷ್ಟೇ ಅಲ್ಲ ಪಂಜಾಬ್ ನ ಅಮೃತಸರದಲ್ಲಿ ಭೇಟಿಯಾಗುತ್ತೇನೆ ಎಂದು ರಾಖಿ ಈತನಿಗೆ ಹೇಳಿದ್ದರಂತೆ. ಇದಕ್ಕಾಗಿ ಈತ ಅರಮನೆಯನ್ನೇ ಬುಕ್ ಮಾಡಿ ಲಕ್ಷಾಂತರ ರು.ಗಳನ್ನು ಖರ್ಚು ಮಾಡಿದ್ದನಂತೆ. ರಾಖಿ ಈಗ ಬರುತ್ತಾಳೆ ಆಗ ಬರುತ್ತಾಳೆ ಎಂದು ಕಾದಿದ್ದೆ ಬಂತು. ಕಡೆಗೂ ಬರಲೇ ಇಲ್ಲ. ನನ್ನ ಜೀವನದಲ್ಲಿ ಇಷ್ಟೆಲ್ಲಾ ಆಟ ಆಡಿದ ರಾಖಿಯನ್ನು ಸುಮ್ಮನೆ ಬಿಡಬಾರದು ಎಂದು ಇದೀಗ ಕೋರ್ಟ್ ಮೆಟ್ಟಿಲೇರಿರುವುದಾಗಿ ಆತ ಹೇಳಿದ್ದಾನೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada