»   » ನಟಿ ಮೇಘನಾ ನಾಯ್ಡು ಇ ಮೇಲ್ ಐಡಿಗೆ ಕನ್ನ

ನಟಿ ಮೇಘನಾ ನಾಯ್ಡು ಇ ಮೇಲ್ ಐಡಿಗೆ ಕನ್ನ

Posted By:
Subscribe to Filmibeat Kannada

ತಮ್ಮ ಇ ಮೇಲ್ ಐಡಿಗೆ ಅನಾಮಿಕ(ಕೆ) ಕನ್ನ ಹಾಕಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದಾಗಿ ಬಾಲಿವುಡ್ ನಟಿ ಮೇಘನಾ ನಾಯ್ಡು ಮುಂಬೈ ಅಪರಾಧ ವಿಭಾಗಕ್ಕೆ ದೂರು ನೀಡಿದ್ದಾರೆ. ನನ್ನ ಇ ಮೇಲ್ ಖಾತೆಯನ್ನು ಹ್ಯಾಕ್ ಮಾಡಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಹ್ಯಾಕ್ ಮಾಡಿರುವ ತಮ್ಮ ಇ ಮೇಲ್ ಐಡಿಗೆ ಲಾಗಿನ್ ಆಗಿ ತಮ್ಮ ಸ್ನೇಹಿತರೊಂದಿಗೆ ಸತತ ಎರಡು ತಾಸುಗಳ ಕಾಲ ಹರಟೆ ಹೊಡೆದಿದ್ದು, ತಾನೀಗ ಗರ್ಭಿಣಿ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿರುವುದಾಗಿ ಮೇಘನಾ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಅಲವತ್ತುಕೊಂಡಿದ್ದಾರೆ.

ತಮ್ಮ ಇ ಮೇಲ್ ಐಡಿ ಮೂಲಕ ಮೂವರು ನಟರನ್ನು ಮನಬಂದಂತೆ ಹ್ಯಾಕರ್ ನಿಂದಿಸಿದ್ದಾನೆ(ಳೆ). ಈ ಬಗ್ಗೆ ಅನುಮಾನಗೊಂಡ ನನ್ನ ಸ್ನೇಹಿತರು ತಕ್ಷಣ ನನಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಈಗ ನನ್ನ ಇ ಮೇಲ್ ಐಡಿಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ನನ್ನ ಪಾಸ್ ವರ್ಡ್ ಸಹ ಬದಲಾಯಿಸಲಾಗಿದೆ. ಮೇಘನಾ ಅವರ ಉಳಿದ ಇ ಮೇಲ್ ಐಡಿಗಳು ಹ್ಯಾಕ್ ಆಗಿವೆ ಎಂದು ಆಕೆ ದೂರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada