»   »  ಸ್ಲಂಡಾಗ್ ಚಿತ್ರದ ಗಳಿಕೆ ರು.800 ಕೋಟಿಗಳು

ಸ್ಲಂಡಾಗ್ ಚಿತ್ರದ ಗಳಿಕೆ ರು.800 ಕೋಟಿಗಳು

Posted By: Staff
Subscribe to Filmibeat Kannada
Slumdog Millionaire
ಎಂಟು ಆಸ್ಕರ್ ಪ್ರಶಸ್ತಿಗಳನ್ನ್ನು ಪಡೆದ 'ಸ್ಲಂಡಾಗ್ ಮಿಲಿಯನೇರ್' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿ ಮುನ್ನುಗ್ಗುತ್ತಿದೆ. ಈ ಚಿತ್ರವನ್ನು ಬಿಡುಗಡೆ ಮಾಡಿದ'ಫಾಕ್ಸ್ ಸರ್ಚ್ ಲೈಟ್' ವಿತರಣ ಸಂಸ್ಥೆ ಮೇಲೆ ಹಣದ ಸುರಿಮಳೆಯಾಗುತ್ತಿದೆ.

ವಾಸ್ತವವಾಗಿ ಉತ್ತರ ಅಮೆರಿಕದಲ್ಲಿ ವಾರ್ನರ್ ಇಂಡಿಪೆಂಡೆಂಟ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ವಾರ್ನರ್ ಬ್ರದರ್ಸ್ ತಮ್ಮ ಸ್ಟುಡಿಯೋಗೆ ಶಾಶ್ವತವಾಗಿ ಬೀಗ ಜಡಿದು ಬಿಟ್ಟಿದ್ದರು. ಈ ಘಟನೆಯಿಂದ ಸ್ಲಂಡಾಗ್ ಚಿತ್ರ ಬಿಡುಗಡೆ ಇಕ್ಕಟ್ಟಿಗೆ ಸಿಕ್ಕಿಕೊಂಡಿತು. ವಿಧಿಯಿಲ್ಲದೆ ಚಿತ್ರ ನಿರ್ಮಾಪಕರು ಇತರೆ ಸ್ಟುಡಿಯೋಗಳತ್ತ ಮುಖಮಾಡಿದರು.

ಕೊನೆ ಕ್ಷಣದಲ್ಲಿ ಟ್ವೆಂಟಿಯತ್ ಸೆಂಚುರಿ ಫಾಕ್ಸ್ ಸ್ಟುಡಿಯೋದ ಸೋದರ ಸಂಸ್ಥೆ ಫಾಕ್ಸ್ ಸರ್ಚ್ ಲೈಟ್ ಈ ಚಿತ್ರ ಬಿಡುಗಡೆಗೆ ಮುಂದಾಯಿತು. ಆಗಸ್ಟ್ ತಿಂಗಳಲ್ಲಿ ಫಾಕ್ಸ್ ಸಂಸ್ಥೆ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿತು. ನವೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಸ್ಲಂಡಾಗ್ ಚಿತ್ರ ನಂತರ ಸೃಷ್ಟಿಸಿದ್ದು ಇತಿಹಾಸ. ಚಿತ್ರದ ಜೊತೆಗೆ ಫಾಕ್ಸ್ ಸಂಸ್ಥೆಯ ಹಣೆಬರಹವೂ ಬದಲಾಯಿತು.

ಉತ್ತರ ಅಮೆರಿಕಾದಲ್ಲಿ ಇದುವರೆಗೂ ಸುಮಾರು ರು.500 ಕೋಟಿ ರು.ಗಳಷ್ಟು ಗಳಿಸಿದೆ. ಕಳೆದ 15 ವಾರಗಳಲ್ಲಿ ಸ್ಲಂಡಾಗ್ 9 ವಾರಗಳ ಕಾಲ ಮೊದಲ ಸ್ಥಾನದಲ್ಲಿದೆ. ಎಂಟು ಆಸ್ಕರ್ ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಂಡ ಸ್ಲಂಡಾಗ್ ಚಿತ್ರ ಬಾಕ್ಸಾಫೀಸ್ ದಾಖಲೆಗಳನ್ನು ಮುರಿಯುತ್ತಿದೆ.

75 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಿದ್ದ ಸ್ಲಂಡಾಗ್ ಚಿತ್ರ ಸುಮಾರು ಅದರ ಹತ್ತು ಪಟ್ಟು ಹಣವನ್ನು ಗಳಿಸಿದೆ ಎಂದು ಸಿನಿಮಾ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದಾದ್ಯಂತ ಈ ಚಿತ್ರ ರು.800 ಕೋಟಿಯಷ್ಟು ಹಣ ಗಳಿಸಿರುವುದಾಗಿ ಅಂದಾಜು ಮಾಡಲಾಗಿದೆ. ಅಮೆರಿಕಾದಲ್ಲೇ ರು.500 ಕೋಟಿ ಗಳಿಸಿದ್ದು, ಸ್ಯಾಟಲೈಟ್ ಹಕ್ಕುಗಳು ಹಾಗೂ ಇತರೆ ಮೂಲಗಳಿಂದ ರು.250 ಕೋಟಿ ಆದಾಯ ಬಂದಿದೆ. ಭಾರತದಲ್ಲಿ ಸ್ಲಂಡಾಗ್ ಚಿತ್ರದ ಗಳಿಕೆ ರು.30 ಕೋಟಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ
ಸ್ಲಂ ಡಾಗ್ ಮಿಲಿಯನೇರ್ ಚಿತ್ರ ವಿಮರ್ಶೆ
ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ 8 ಆಸ್ಕರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada