»   » ಆನ್ ಲೈನ್ ನಲ್ಲಿ ಐಶು ಪಾಸ್ ಪೋರ್ಟ್ ಬಹಿರಂಗ!

ಆನ್ ಲೈನ್ ನಲ್ಲಿ ಐಶು ಪಾಸ್ ಪೋರ್ಟ್ ಬಹಿರಂಗ!

Posted By:
Subscribe to Filmibeat Kannada

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಆತಂಕಗೊಂಡಿದ್ದಾರೆ. ಆಕೆಯ ಪಾಸ್ ಪೋರ್ಟಿನ ನೆರಳಚ್ಚು ಕಾಪಿಗಳು ಬಾಲಿವುಡ್ ಬ್ಲಾಗ್ ಗಳಲ್ಲಿ ಹರಿದಾಡುತ್ತಿರುವುದೇ ಆಕೆಯ ಆತಂಕಕ್ಕೆ ಕಾರಣವಾಗಿದೆ. ತಮಗೇ ಗೊತ್ತಿಲ್ಲದಂತೆ ಇವು ಹೇಗೆ ಬ್ಲಾಗರ್ ಗಳಿಗೆ ಸಿಕ್ಕಿದವು ಎಂದು ಐಶ್ವರ್ಯ ಚಿಂತೆಗೀಡಾಗಿದ್ದಾರೆ.

ಐಶ್ವರ್ಯ ರೈ ಪಾಸ್ ಫೋರ್ಟ್ ಬ್ಲಾಗ್ ಗಳಲ್ಲಿ ಇಣುಕಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಅಮಿತಾಬ್ ಬಚ್ಚನ್ ಕುಟುಂಬ ಸಹ ಈ ಬಗ್ಗೆ ಮಂಡೆ ಬಿಸಿ ಮಾಡಿಕೊಂಡಿದೆ. ಬ್ಲಾಗ್ ಗಳಲ್ಲಿ ಐಶು ಪಾಸ್ ಪೋರ್ಟ್ ಕಾಪಿಗಳು ಸರಿದಾಡುತ್ತಿರುವ ಬಗ್ಗೆ ಕೇಳಿದ ಅವರ ಕುಟುಂಬಿಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಪಾಸ್ ಪೋರ್ಟ್ ನಲ್ಲಿರುವ ವಿವರಗಳನ್ನು ನೋಡಿದರೆ ಇದು ಅಧಿಕೃತ ಪಾಸ್ ಪೋರ್ಟ್ ಎನ್ನಿಸುತ್ತದೆ. ಮದುವೆಗೂ ಮುನ್ನ ಪಡೆದಿರುವ ಪಾಸ್ ಪೋರ್ಟ್ ಇದಾಗಿದ್ದು ಅವರ ಹೆಸರು ಐಶ್ವರ್ಯ ರೈ ಎಂದಿದೆ. ಮೇ 2006 ಎಂಬ ದಿನಾಂಕದೊಂದಿ ಮಂಗಳೂರು, ಕರ್ನಾಟಕ ಎಂಬ ವಿವರಗಳು ನಮೂದಾಗಿವೆ. ಅತ್ಯಂತ ಖಾಸಗಿ ದಾಖಲೆಯಾದ ಪಾಸ್ ಪೋರ್ಟ್ ಕಾಪಿಗಳು ಹೇಗೆ ಮತ್ತೊಬ್ಬರ ಕೈ ಸೇರಿತು ಎಂಬ ಪ್ರಶ್ನೆ ಉದ್ಭವಿಸಿದೆ.

ಪಾಸ್ ಪೋರ್ಟ್ ನಲ್ಲಿನ ವಿವರಗಳು ದುರುಪಯೋಗವಾಗುವ ಸಾಧ್ಯತೆಗಳು ಇದ್ದು ಐಶ್ ಕುಟುಂಬಿಕರು ಚಿಂತಾಕ್ರಾಂತರಾಗಿದ್ದಾರೆ. ಐಶ್ವರ್ಯ ರೈ ಪಾಸ್ ಪೋರ್ಟ್ ವಿವರಗಳು ಸೋರಿಕೆಯಾಗುವಲ್ಲಿ ಚಿತ್ರ ನಿರ್ಮಾಣ ಸಂಸ್ಥೆಗಳ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಈ ಸಂಬಂಧ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.ಪೊಲೀಸ್ ಅಧಿಕಾರಿಗಳು ಐಶ್ವರ್ಯ ರೈ ಅವರನ್ನು ಪ್ರಶ್ನಿಸುತ್ತಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ. ಪಾಸ್ ಪೋರ್ಟ್ ವಿವರಗಳನ್ನು ಸೋರಿಕೆ ಮಾಡುವುದಾಗಲಿ ಹಾಗೂ ಪಾಸ್ ಪೋರ್ಟ್ ಕಾಪಿಯನ್ನು ಅಂತಜಾಲದಲ್ಲಿ ಪ್ರಕಟಿಸುವುದಾಗಲಿ ಗಂಭೀರ ಅಪರಾಧವೆನಿಸುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada