»   » ಬಿಗ್ ಬಿಗೆ ವಾಸಿಯಾಗದ 'ಕೂಲಿ' ಗಾಯ

ಬಿಗ್ ಬಿಗೆ ವಾಸಿಯಾಗದ 'ಕೂಲಿ' ಗಾಯ

Posted By:
Subscribe to Filmibeat Kannada

ನಾನು ಮದ್ಯವ್ಯಸನಿಯಲ್ಲ ಆದರೂ, ಪಿತ್ತ ಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ. 28 ವರ್ಷಗಳ ಹಿಂದೆ, ಮನಮೋಹನ್ ದೇಸಾಯಿ ಅವರ ಕೂಲಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಹುತೇಕ ಪ್ರಾಣಕ್ಕೆ ಸಂಚಕಾರವಾಗಬಹುದಾಗಿದ್ದ ಪೆಟ್ಟು ತಿಂದು ಬದುಕುಳಿದ 67 ವರ್ಷದ ನಟ, ಸಾಮಾನ್ಯವಾಗಿ ಮದ್ಯಪಾನದ ಚಟ ಇರುವವರಲ್ಲಿ ಮಾತ್ರ ಕಾಣಬರುವ ಈ ಕಾಯಿಲೆ, ತುರ್ತುಸ್ಥಿತಿಯಲ್ಲಿ ನಡೆದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತ ಪಡೆದ ಕಾರಣ ಅಪರಿಚಿತ ದಾನಿಯ ಮೂಲಕ ತಮಗೆ ಬಂದಿರಬಹುದು ಎಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

1982ರ ಆಗಸ್ಟ್ 2 ರಂದು ಸಹ ನಟ ಪುನೀತ್ ಇಸ್ಸಾರ್ ಜತೆ ಹೊಡೆದಾಟದ ಸನ್ನಿವೇಶವೊಂದರಲ್ಲಿ ಬಚ್ಚನ್ ರ ಕರುಳಿಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹಲವಾರು ತಿಂಗಳ ಕಾಲ ಅವರು ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು. ಯಾವುದೋ ಒಬ್ಬ ದಾನಿಯ ರಕ್ತದಲ್ಲಿ ಕಾಮಾಲೆ (ಆಸ್ಟ್ರೇಲಿಯನ್ ಅಂಟಿಜೆನ್ ಹೆಪಟೈಟಿಸ್) ಸೋಂಕು ಇದ್ದಿರಬಹುದು.

1982ರಲ್ಲಿ ಈ ಬಗೆಯ ಕಾಮಾಲೆ ಬಗ್ಗೆ ಯಾರಿಗೂ ಗೊತ್ತೂ ಇರಲಿಲ್ಲ. ಇದು ನನ್ನ ಶರೀರದಲ್ಲಿ ಪ್ರವೇಶಿಸಿ ವ್ರಣದಂತಾಗಿ ಪಿತ್ತಜನಕಾಂಗವನ್ನು ಹದಗೆಡಿಸಿದೆ. 8 ವರ್ಷಗಳ ಹಿಂದೆ ಎಂಆರ್‌ಐ ಸ್ಕ್ಯಾನಿಂಗ್ ಸಮಯದಲ್ಲಿ ನನ್ನ ಪಿತ್ತಜನಕಾಂಗದ ಶೇ. 25 ರಷ್ಟು ಭಾಗವನ್ನು ಅದು ನಾಶ ಪಡಿಸಿರು ವುದು ತಿಳಿದುಬಂದಿದೆ ಎಂದು ಅಮಿತಾಬ್ ಹೇಳಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada