ರಜನಿಕಾಂತ್ ಜತೆ ನಟಿಸಲು ದೀಪಿಕಾಗೆ ಟೈಮೇ ಇಲ್ವಂತೆ

By Rajendra

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಜತೆ ಅಭಿನಯಿಸಲು ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಒಪ್ಪಿದ್ದರು. ಆದರೆ ಆ ಚಿತ್ರದಲ್ಲಿ ನಟಿಸಲು ಆಕೆಗೆ ಈಗ ಟೈಮೇ ಇಲ್ವಂತೆ. ಹೋಗಲಿ ಚಿತ್ರದ ಕತೆಯಾದರೂ ಕೇಳಿ ಎಂದರೆಅದಕ್ಕೂ ಪುರಸೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕಿ ಕಲ್ಪನಾ ಲಜ್ಮಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಬಾಲಿವುಡ್‌ನಲ್ಲಿ ಚಲಾವಣೆಯಲ್ಲಿರುವ ದೀಪಿಕಾಗೆ ಸಖತ್ ಬೇಡಿಕೆ ಇದೆ. ಸಹಜವಾಗಿಯೇ ಆಕೆಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ರಜನಿಕಾಂತ್ ಜತೆ ನಟಿಸಲು ಆಕೆದೇನು ಅಭ್ಯಂತರವಿಲ್ಲವಂತೆ. ಆದರೆ ಏನು ಮಾಡುವುದು ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದು ದೀಪಿಕಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ರಜನಿಕಾಂತ್ ಜತೆ ನಟಿಸಲು ನಟಿಯರು ನಾ ಮುಂದು ತಾ ಮುಂದು ಎಂದು ಬರುತ್ತಾರೆ. ಆದರೆ ದೀಪಿಕಾ ಮಾತ್ರ ಹಿಂದೆ ಹಿಂದೆ ಸರಿಯುತ್ತಿದ್ದಾರೆ. ಒಂದು ವೇಳೆ ದೀಪಿಕಾ ಡೇಟ್ಸ್ ಹೊಂದಿಸಿಕೊಂಡರೆ ಚಿತ್ರ ಇದೇ ವರ್ಷ ಸೆಟ್ಟೇರಲಿದೆಯಂತೆ. ಅಲ್ಲಿಯವರೆಗೂ ಆ ಚಿತ್ರ ಸೆಟ್ಟೇರುವ ಲಕ್ಷಣಗಳು ಗೋಚರಿಸುತ್ತಿಲ್ಲ. [ದೀಪಿಕಾ ಪಡುಕೋಣೆ]

More from Filmibeat

English summary
Deepika Padukone who was quiet excited about the film offered by Rajnikanth has in a delima now. She is undergoing a very tight schedule and thus is too busy to even listen to the script offered to her by Kalpana Lajmi opposite Rajni.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X