For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಧ್ರುವದಿಂದ ಉತ್ತರ ಧ್ರುವಕೆ ತಾರೆ ಸ್ನೇಹಾ

  By Rajendra
  |

  ಮೋಹಕ ತಾರೆ ಸ್ನೇಹಾ ದಕ್ಷಿಣ ಧ್ರುವದಿಂದ ಉತ್ತರ ಧ್ರುವಕೆ ಅಡಿಯಿಟ್ಟಿದ್ದಾರೆ. ಅಂದರೆ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದಕ್ಷಿಣದ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದ ಸ್ನೇಹಾಗೆ ಬಾಲಿವುಡ್‌ನಿಂದ ಕರೆ ಬಂದಿದೆ. ಅಸಿನ್ ತೊಟ್ಟುಂಕಲ್, ತ್ರಿಶಾ ಕೃಷ್ಣನ್ ಹಾಗೂ ಕಾಜಲ್ ಅಗರವಾಲ್ ಬಳಿಕ ಹಿಂದಿ ಚಿತ್ರರಂಗಕ್ಕೆ ಅಡಿಯಿಡುತ್ತಿರುವ ನಟಿ ಸ್ನೇಹಾ.

  ನಾಸಿರುದ್ದೀನ್ ಶಾ ಅವರ ಪತ್ನಿಯಾಗಿ ಹಾಗೂ ಆಯೇಷಾ ಟಕಿಯಾ ತಾಯಿಯಾಗಿ 'ಮ್ಯಾಡ್ ಡ್ಯಾಡ್' ಚಿತ್ರದಲ್ಲಿ ಸ್ನೇಹಾ ಕಾಣಿಸಲಿದ್ದಾರೆ. ಈ ಚಿತ್ರದಲ್ಲಿಎಂಬತ್ತರ ದಶಕದ ಮಹಿಳೆಯ ಗೆಟಪ್‌‍ನಲ್ಲಿ ಸ್ನೇಹಾ ಕಾಣಿಸಲಿರುವುದು ವಿಶೇಷ. ಈ ಪಾತ್ರ ತನ್ನ ಪಾಲಿಗೆ ಸವಾಲೊಡ್ಡವ ಪಾತ್ರ ಎಂದಿದ್ದಾರೆ ಸ್ನೇಹಾ. ಈ ಚಿತ್ರವನ್ನು ರೇವತಿ ಎಸ್ ವರ್ಮಾ ಅವರು ನಿರ್ದೇಶಿಸುತ್ತಿದ್ದಾರೆ.

  ತಮಿಳು, ತೆಲುಗು ಚಿತ್ರರಂಗದಲ್ಲಿಗುರುತಿಸಿಕೊಂಡಿರುವ ಸ್ನೇಹಾ ಹುಟ್ಟಿದ್ದು ಮುಂಬೈನಲ್ಲಾದರೂ ಬೆಳೆದದ್ದು ಮಾತ್ರ ದುಬೈನಲ್ಲಿ. ಸದಾ ಹಸನ್ಮುಖಿಯಾಗಿರುವ ಈಕೆಗೆ ಅಭಿಮಾನಿಗಳು 'ಸ್ಮೈಲ್ ಕ್ವೀನ್ ಆಫ್ ಸೌತ್ ಸಿನಿಮಾ' ಎಂಬ ಬಿರುದನ್ನು ಪ್ರಸಾದಿಸಿದ್ದಾರೆ. ಕನ್ನಡದ 'ರವಿಶಾಸ್ತ್ರಿ' ಸೇರಿದಂತೆ 7'ಓ ಕ್ಲಾಕ್, 'ಆಗೋದೆಲ್ಲಾ ಒಳ್ಳೇದಕ್ಕೆ' ಚಿತ್ರಗಳಲ್ಲಿ ಸ್ನೇಹಾ ಅಭಿನಯಿಸಿದ್ದಾರೆ.

  English summary
  Sneha has been roped in for upcoming Bollywood film Mad Dad. She will be portraying the roles of Naseeruddin Shah's wife and and mother of Ayesha Takia in the film. Her looks and costumes will be in the 1980s style, says a source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X