»   » ಮೂರು ದಿನದಲ್ಲಿ ಭರ್ಜರಿ ಕಲೆಕ್ಷನ್ ಕಂಡ ದೇಸಿ ಬಾಯ್ಸ್

ಮೂರು ದಿನದಲ್ಲಿ ಭರ್ಜರಿ ಕಲೆಕ್ಷನ್ ಕಂಡ ದೇಸಿ ಬಾಯ್ಸ್

Posted By:
Subscribe to Filmibeat Kannada

ಗರಂ ಮಸಾಲಾ ನಂತರ ಅಕ್ಷಯ್ ಕುಮಾರ್ ಹಾಗೂ ಜಾನ್ ಅಬ್ರಹಾಂ ಒಟ್ಟಿಗೆ ನಟಿಸಿರುವ ಚಿತ್ರ 'ದೇಸಿಬಾಯ್ಸ್. ಈ ಚಿತ್ರದ ಪ್ರಚಾರ ಕಾರ್ಯ ಬಿಡುಗಡೆಯ ನಂತರವೂ ಭರ್ಜರಿಯಾಗಿ ಮುಂದುವರಿದಿದೆ. ಈ 'ದೇಸಿ ಬಾಯ್ಸ್' ಗೆ ನಾಯಕಿಯರಾಗಿ ದೀಪಿಕಾ ಪಡುಕೋಣೆ ಹಾಗೂ ಚಿತ್ರಾಂಗದಾ ಸಿಂಗ್ ಇದ್ದಾರೆ.

ಈ ದೇಸಿ ಬಾಯ್ಸ್ ಅಕ್ಷಯ್ ಹಾಗು ಜಾನ್ ಜೊತೆ ದೀಪಿಕಾ, ಚಿತ್ರಾಂಗದಾ ಕೂಡ ಜೊತೆಯಾಗಿದ್ದಾರೆ. ಬಾಲಿವುಡ್ ಪಂಡಿತರ ಲೆಕ್ಕಚಾರದಂತೆ ಈ ಚಿತ್ರ ಮೂರು ದಿನದಲ್ಲಿ 30 ಕೋಟಿ ರು. ಗಳಿಸಬೇಕಿತ್ತು. ಆದರೆ ಚಿತ್ರ ಗಳಿಸಿರುವ 25.50 ಕೋಟಿ ರು. ಸಾಮಾನ್ಯ ಮೊತ್ತವೇನಲ್ಲ. ಮೊದಲ ದಿನ 8, ಎರಡನೆ ದಿನ 8.25 ಹಾಗೂ ಮೂರನೆ ದಿನ 9.25 ಕೋಟಿ ರು. ಗಳಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಭಾರತದಲ್ಲಿ ಸುಮಾರು 2200 ಥಿಯೇಟರ್ ಗಳಲ್ಲಿ ಬಿಡುಗಡೆಯಾದ ಚಿತ್ರ ದೇಸಿಬಾಯ್ಸ್. ಬಾಲಿವುಡ್ ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ ಗಳ ಚಿತ್ರಗಳಿಗೆ ಹೋಲಿಸಿದರೆ ಓಪನಿಂಗ್ ಡಲ್ ಎನಿಸಿತ್ತು. ಆದರೆ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು, ದಿನದಿಂದ ದಿನಕ್ಕೆ ಚಿತ್ರ ಹಾಗೂ ಬಾಕ್ಸ್ ಆಫೀಸ್ ಗಳಿಕೆ ಏರುತ್ತಾ ಸಾಗಿದೆ. (ಏಜೆನ್ಸೀಸ್)

English summary
Bollywood Movie Desi Boyz celebrating Success. After the release of three days its total collection is Rs. 25.50 Crore. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada